ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ರಾಜ್ಯಪಾಲರ ಮಧ್ಯೆದ ಮುಸುಕಿನ ಗುದ್ದಾಟ ಮತ್ತೆ ಮುಂದುವರೆದಿದೆ.
ರಾಜ್ಯಪಾಲರ ಅದೇಶದಿಂದ ಈಗ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ಕಾಂಗ್ರೆಸ್ ಸರ್ಕಾರದ ಮತ್ತೊಂದು ಎಡವಟ್ಟಿಗೆ ಈಗ ರಾಜ್ಯಪಾಲರು ಬ್ರೇಕ್ ಹಾಕಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತ ಒಲೈಕೆಗೆ ಮುಂದಾಗಿತ್ತು ಎನ್ನಲಾಗಿದೆ.
ನಗರದ ಎರಡು ಎಕರೆ ಸರ್ಕಾರಿ ಜಮೀನನ್ನು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಿತ್ತು. ನೂರಾರು ಕೋಟಿ ಬೆಲೆಬಾಳುವ ಭೂಮಿಯನ್ನು ಅಲ್ಪಸಂಖ್ಯಾತ ಇಲಾಖೆಗೆ ವರ್ಗವಣೆ ಮಾಡಲಾಗಿತ್ತು. ಚಾಮರಾಜಪೇಟೆ ಕ್ಷೇತ್ರದ ಚಲುವಾದಿಪಾಳ್ಯ ವಾರ್ಡ್ ನಲ್ಲಿ ಇರುವ ಪಶುವೈದ್ಯ ಜಾಗವನ್ನು ಕಾಂಗ್ರೆಸ್ ಸರ್ಕಾರ ಹಸ್ತಾಂತರ ಮಾಡಿತ್ತು. ಸರ್ಕಾರದ ನಡೆಗೆ ಸ್ಥಳೀಯ ಚಾಮರಾಜಪೇಟೆ ನಿವಾಸಿಗಳು ಅಕ್ರೋಶ ವ್ಯಕ್ತಪಡಿಸಿದ್ದರು.
ಈ ಜಾಗ ಇಷ್ಟು ದಿನ ಪಶುಪಾಲನೆ ಮತ್ತು ಪಶುವೈದ್ಯ ಚಿಕಿತ್ಸೆಯ ಆಸ್ಪತ್ರೆಯ ಜಾಗ ಆಗಿತ್ತು. ಪಶು ಅಸ್ಪತ್ರೆ ಉಪಯೋಗಕ್ಕೆ ಬಾರದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರಿಗೆ ಭೂಮಿ ಹಸ್ತಾಂತರ ಮಾಡಲಾಗಿತ್ತು. ಅಲ್ಲಿಂದ ಪಶು ಆಸ್ಪತ್ರೆಯನ್ನು ನಗರದ ಹೊರ ವಲಯಕ್ಕೆ ಶಿಪ್ಟ್ ಮಾಡಲಾಗಿತ್ತು.
ಚಾಮರಾಜಪೇಟೆ ಕ್ಷೇತ್ರದಲ್ಲಿ ಅತಿಹೆಚ್ಚು ಅಲ್ಪಸಂಖ್ಯಾತ ಜನರು ವಾಸ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಮಕ್ಕಳಿಗೆ ವಸತಿ ವಿದ್ಯಾರ್ಥಿನಿಲಯ ಇಲ್ಲ. ಹೀಗಾಗಿ ವಿದ್ಯಾರ್ಥಿ ನಿಲಯ ಸ್ಥಾಪಿಸಬೇಕೆಂದು ಸ್ಥಳೀಯ ಶಾಸಕರು ಮನವಿ ಮಾಡಿದ್ದರು. ಹೀಗಾಗಿ ಶಾಸಕರ ಬೇಡಿಕೆಯ ಹಿನ್ನೆಲೆಯಲ್ಲಿ ಎರಡು ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಹಸ್ತಾಂತರ ಮಾಡಿತ್ತು.
ಸರ್ಕಾರದ ಈ ಆದೇಶಕ್ಕೆ ರಾಜ್ಯಪಾಲರು ಬ್ರೇಕ್ ಹಾಕಿದ್ದಾರೆ. ಜಾಗದ ಬಗ್ಗೆ ಪ್ರಾದೇಶಿಕ ಅಯುಕ್ತರು ತನಿಖೆ ನಡೆಸಿ ವರದಿ ನೀಡಿತ್ತು. ವರದಿ ಅನ್ವಯ ಈ ಜಾಗ ಪಶುವೈದ್ಯ ಇಲಾಖೆಗೆ ಸೇರಿದ್ದಾಗಿದೆ. ಹೀಗಾಗಿ ಈ ಜಾಗವನ್ನು ಪಶು ಇಲಾಖೆಗೆ ವಾಪಸ್ ನೀಡಬೇಕು ಎಂದು ರಾಜ್ಯಪಾಲರು ಅದೇಶ ಹೊರಡಿಸಿದ್ದಾರೆ. ರಾಜ್ಯಪಾಲರ ಆದೇಶದಂತೆ ಅಲ್ಪಸಂಖ್ಯಾತರಿಗೆ ನೀಡಿದ ಜಾಗವನ್ನು ಮತ್ತೆ ಪಶುಪಾಲನೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಹೀಗಾಗಿ ಸರ್ಕಾರಕ್ಕೆ ಮುಜುಗರ ಉಂಟಾಗಿದೆ.