ಕೆಲವರು ಹೆಸರು ಮಾಡಿ ಅಷ್ಟೇ ಸಲೀಸಾಗಿ ಕೆಳಗೆ ಬಿದ್ದಿದ್ದನ್ನು ನೋಡಿದ್ದೇವೆ. ಕೆಲವರು ಹೆಸರಿಗಾಗಿ, ಪ್ರಸಿದ್ಧಿಗಾಗಿಯೂ ಕೆಲವು ತಪ್ಪುಗಳನ್ನು ಮಾಡಿರುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲಿ ನಿವೇದಿತಾಗೌಡ ಮಾಡಿರುವುದಕ್ಕೆ ನೀವೇ ಉತ್ತರ ನೀಡಬೇಕು.
ಬಾರ್ಬಿ ಡಾಲ್, ನಿವ್ವಿ ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ನಿವೇದಿತಾಗೌಡ ಈಗ ಹಾಟ್ ಲುಕ್ ನಲ್ಲಿ ಪಬ್ ನಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನರು ತಮಗೆ ತಿಳಿದಂತೆ ಕಮೆಂಟ್ ಮಾಡುತ್ತಿದ್ದಾರೆ.
ಈ ವಿಡಿಯೋವನ್ನು ನಿವೇದಿತಾಗೌಡ ಹಂಚಿಕೊಂಡಿಲ್ಲ. ಬದಲಾಗಿ ರಾಕೇಶ್ ಎಂಬ ವ್ಯಕ್ತಿ ಹಂಚಿಕೊಂಡಿದ್ದಾರೆ. ನಿವೇದಿತಾಗೌಡ ಪಬ್ ನಲ್ಲಿ ಕುಳಿತಾಗ, ರಾಕೇಶ್ ನಿಮ್ಮೊಂದಿಗೆ ಮಾತನಾಡಬಹುದಾ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಮಾತು ಕೊನೆಗೆ ನಿವೇದಿತಾ ಪಬ್ ನಲ್ಲಿ ಡ್ಯಾನ್ಸ್ ಮಾಡುವವರೆಗೂ ಸಾಗಿದೆ. ಅಲ್ಲದೇ, ಬೋಲ್ಡ್ ಲುಕ್ ನಲ್ಲಿ ಕೆಲವು ಫೋಸ್ ಗಳನ್ನು ಕೂಡ ಕ್ಯಾಮರಾಗೆ ನೀಡಿದ್ದಾರೆ. ಇದೆಲ್ಲ ವೈರಲ್ ಆಗಿರುವ ವಿಡಿಯೋದಲ್ಲಿದೆ. ಆದರೆ, ಇದಕ್ಕೆ ನೆಟ್ಟಿಗರು ಪರ ಹಾಗೂ ವಿರೋಧ ಕಮೆಂಟ್ ಮಾಡುತ್ತಿದ್ದಾರೆ.