ರಾಮನಗರ: ಜಿಲ್ಲೆಯಲ್ಲಿ ಮತ್ತೆ ಗಜಪಡೆಯ ಉಪಟಳ ಮುಂದುವರೆದಿದ್ದು, ಜನರು ರೋಸಿ ಹೋಗಿದ್ದಾರೆ.
ಚನ್ನಪಟ್ಟಣದಲ್ಲಿ (Channapatna) ಈಗ ಮತ್ತೊಂದು ಕಾಡಾನೆ ದಾಳಿಯ ಪ್ರಕರಣ ಬಯಲಿಗೆ ಬಂದಿದೆ. ಊರಹಬ್ಬದ ದಿನವೇ ಗ್ರಾಮಕ್ಕೆ ಕಾಡಾನೆಗಳು ಎಂಟ್ರಿಯಾಗಿದ್ದು, ಗ್ರಾಮಸ್ಥರು ದಿಕ್ಕಾಪಾಲಾಗಿ ಓಡಿರುವ ಘಟನೆ ಚನ್ನಪಟ್ಟಣ ಟೌನ್ ಸಮೀಪದ ಕರಿಯಪ್ಪನದೊಡ್ಡಿಯಲ್ಲಿ ನಡೆದಿದೆ.
ಮೆಹದಿನಗರ ಹಾಗೂ ಪಕ್ಕದ ಬಡಾವಣೆಯಲ್ಲೂ ಕಾಡಾನೆಗಳ ಹಿಂಡು ಸಂಚಾರ ಮಾಡಿ ನಿವಾಸಿಗಳಿಗೆ ಭಯಹುಟ್ಟಿಸಿವೆ. ಕರಿಯಪ್ಪನದೊಡ್ಡಿ ಗ್ರಾಮದಲ್ಲಿ ಊರಹಬ್ಬ ನಡೆಯುವ ವೇಳೆ ಏಕಾಏಕಿ ನಾಲ್ಕು ಕಾಡಾನೆಗಳು ಗ್ರಾಮಕ್ಕೆ ನುಗ್ಗಿವೆ. ದೇವಾಲಯದ ಸಮೀಪ ಇದ್ದ ಜನ ಓಡಿ ಹೋಗಿದ್ದಾರೆ. ಅಲ್ಲದೇ, ಕೆಲವೆಡೆ ಹಾನಿ ಮಾಡಿವೆ.
ಕಾಡಾನೆ ದಾಳಿಯಿಂದಾಗಿ ಭಯಭೀತರಾಗಿರುವ ಜನರು ಕಾಡಾನೆಗಳ ಹಿಂಡು ಕಂಡು ಚನ್ನಪಟ್ಟಣ ಜನತೆ ಬೆಚ್ಚಿಬಿದ್ದಿದ್ದು, ಕಾಡಾನೆಗಳ ಉಪಟಳಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಪಕ್ಕದ ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಕಾಡಾನೆಗಳು ಬಂದಿವೆ.