ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್ ಈಗಾಗಲೇ ಅರೆಸ್ಟ್ ಆಗಿದ್ದು, ಡಿಆರ್ ಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್ ಅಧಿಕಾರಿಗಳು ಕೂಡ ಈ ಅಪರಾಧದಲ್ಲಿ ಭಾಗಿಯಾಗಿರುವ ಕುರಿತು ಸಾಕ್ಷಿಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಡಿಆರ್ ಐ ಅಧಿಕಾರಿಗಳು ಸಿಬಿಐಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಸಿಬಿಐನಿಂದ ಕೂಡ ಎಫ್ ಐಆರ್ ದಾಖಲಾಗಿದೆ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಬೆಂಗಳೂರು ಹಾಗೂ ಮುಂಬಯಿನಲ್ಲಿ ತೀವ್ರ ತನಿಖೆ ನಡೆಸುತ್ತಿದ್ದಾರೆ.
ನಟಿ ನಟಿ ರನ್ಯಾ ರಾವ್ ಈಗ DRI ಅಧಿಕಾರಿಗಳ ಕಸ್ಟಡಿಯಲ್ಲಿದ್ದಾರೆ. ಈ ವೇಳೆ ಅಧಿಕಾರಿಗಳು ನಟಿಯ ಟ್ರಾವೆಲ್ ಹಿಸ್ಟರಿ ಬಯಲಿಗೆ ತಂದಿದ್ದಾರೆ. ನಟಿ ರನ್ಯಾ ವಿಮಾನ ನಿಲ್ದಾಣದ ವಲಸೆ ವಿಭಾಗದಲ್ಲಿ ಫ್ರಿಕ್ವೆಂಟ್ ಟ್ರಾವೆಲರ್ ಎಂದು ನೋಂದಣಿ ಮಾಡಿಕೊಂಡಿದ್ದಳು. ಫ್ರಿಕ್ವೆಂಟ್ ಟ್ರಾವೆಲರ್ ಅಂದ್ರೆ ನಿರಂತರವಾಗಿ ವಿದೇಶ ಪ್ರಯಾಣ ಮಾಡುವವರು ಎಂದು ಪರಿಗಣಿಸಲಾಗುತ್ತದೆ.
ಈ ಫ್ರಿಕ್ವೆಂಟ್ ಟ್ರಾವೆರ್ ನ್ನೇ ರನ್ಯಾ ಬಂಡವಾಳ ಮಾಡಿಕೊಂಡಿದ್ದಳು. ನಟಿಯೇ DRI ಮುಂದೆ ನೀಡಿರುವ ಹೇಳಿಕೆಯ ಪ್ರಕಾರ, ಯೂರೋಪ್, ಅಮೆರಿಕ, ದುಬೈ ಸುತ್ತಾಟ ನಡೆಸಿದ್ದಾಳೆ.
ಡಿಸೆಂಬರ್ 24ಕ್ಕೆ ದುಬೈ ಪ್ರಯಾಣ ಮಾಡಿ 27 ಕ್ಕೆ ರನ್ಯಾ ಮರಳಿದ್ದಳು.
ಜನವರಿ 18 ರಂದು ಅಮೆರಿಕಕ್ಕೆ ಪ್ರಯಾಣ, 7 ದಿನ ಅಮೆರಿಕದಲ್ಲಿ ತಂಗಿದ್ದ ರನ್ಯಾ
ಜನವರಿ 25 ರಂದು ಅಮೆರಿಕದಿಂದ ಬೆಂಗಳೂರಿಗೆ ವಾಪಸ್
ಫೆಬ್ರವರಿಯಲ್ಲಿ ನಿರಂತರವಾಗಿ ದುಬೈ ಪ್ರವಾಸ ಪ್ರಾರಂಭ ಮಾಡಿದ್ದ ರನ್ಯಾ
ಫೆಬ್ರವರಿ 2 ರಂದು ದುಬೈಗೆ ಪ್ರಯಾಣ ಮಾಡಿದ್ದ ನಟಿ
ಫೆಬ್ರವರಿ 2 ರಿಂದ ಮಾರ್ಚ್ 3 ವರೆಗೂ 5 ಬಾರಿ ಪ್ರಯಾಣ ಬೆಳೆಸಿದ್ದ ರನ್ಯಾ ಈಗ ಪ್ರವಾಸ ಬೆಳೆಸಿ ಪೊಲೀಸರ ಅತಿಥಿಯಾಗಿದ್ದಾಳೆ. ರನ್ಯಾ ಟ್ರಾವೆಲ್ ಹಿಸ್ಟರಿ ಹಿಡಿದು ಈಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.