ವಾಷಿಂಗ್ಟನ್: ಹ್ಯೂಸ್ಟನ್(Houston)ನಿಂದ ಫೀನಿಕ್ಸ್(Phoenix)ಗೆ ತೆರಳುತ್ತಿದ್ದ ಸೌತ್ ವೆಸ್ಟ್ ಏರ್‌ಲೈನ್ಸ್ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಏಕಾಏಕಿ ತಮ್ಮ ಬಟ್ಟೆಯನ್ನೆಲ್ಲ ಕಿತ್ತುಹಾಕಿ ಬೆತ್ತಲೆಯಾದ ಘಟನೆ(Viral News) ನಡೆದಿದೆ. ಈ ಹಿನ್ನೆಲೆಯಲ್ಲಿ ವಿಮಾನವು ಟೇಕಾಫ್ ಆಗದೇ ಗೇಟ್‌ಗೆ ಮರಳಿದೆ. ವಿಲಿಯಂ ಪಿ ಹಾಬಿ ವಿಮಾನ ನಿಲ್ದಾಣದಿಂದ ಫ್ಲೈಟ್ 733 ಟೇಕ್ ಆಫ್ ಆಗಲು ಮುಂದಾಗುತ್ತಿದ್ದಂತೆಯೇ ಈ ವಿಲಕ್ಷಣ ಘಟನೆ ನಡೆದಿದೆ.
ಇನ್ನೇನು ವಿಮಾನ ಟೇಕಾಫ್ ಆಗಬೇಕು ಎನ್ನುವಷ್ಟರಲ್ಲಿ ಮಹಿಳೆಯು ಎದ್ದು ನಿಂತು ಪ್ರಯಾಣಿಕರೆಲ್ಲ ಮುಂದೆ ತನ್ನ ಎಲ್ಲಾ ಬಟ್ಟೆಗಳನ್ನು ಬಿಚ್ಚಿ, ಕಿರುಚುತ್ತಾ ಅತ್ತಿತ್ತು ತಿರುಗಾಡಲು ಪ್ರಾರಂಭಿಸಿದಳು. ಇದರಿಂದ ಸಹ ಪ್ರಯಾಣಿಕರೆಲ್ಲರೂ ಗಾಬರಿಗೊಂಡರು. ಸುಮಾರು 25 ನಿಮಿಷಗಳ ಕಾಲ ಈ ರೀತಿ ವರ್ತಿಸಿದ ಆಕೆ, ಕಾಕ್ ಪಿಟ್ ಬಾಗಿಲು ಬಡಿಯುತ್ತಾ ವಿಚಿತ್ರವಾಗಿ ಕಿರುಚುತ್ತಿದ್ದಳು.
ಈ ಕುರಿತು ಮಾತನಾಡಿರುವ ಪ್ರಯಾಣಿಕರು, “ಆ ಮಹಿಳೆ ಏಕಾಏಕಿ ನಮ್ಮ ಕಡೆಗೆ ತಿರುಗಿ ತನ್ನ ಎಲ್ಲಾ ಬಟ್ಟೆಗಳನ್ನು ಬಿಚ್ಚಿದಳು. ನಂತರ ಅವಳು ವಿಮಾನದ ಮುಂಭಾಗದತ್ತ ಹೋದಳು. ಕಾಕ್ ಪಿಟ್ ಬಾಗಿಲುಗಳನ್ನು ಬಡಿಯಲು ಪ್ರಾರಂಭಿಸಿದಳು. ಒಳಗೆ ಬಿಡುವಂತೆ ಕೇಳಿದಳು, ಜೋರಾಗಿ ಕಿರುಚುತ್ತಿದ್ದಳು” ಎಂದಿದ್ದಾರೆ.
ಕೊನೆಗೆ ವಿಮಾನದ ಸಿಬ್ಬಂದಿಯು ವಿಮಾನ ನಿಲ್ದಾಣದಲ್ಲಿದ್ದ ಹೂಸ್ಟನ್ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ, ಗೇಟ್‌ಗೆ ಮರಳಲು ನಿರ್ಧರಿಸಿದರು. ಮಹಿಳೆಯ ದೇಹವನ್ನು ಕಂಬಳಿಯಿಂದ ಮುಚ್ಚಿ ವಿಮಾನದಿಂದ ಹೊರಗೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಆಕೆ ಅಲ್ಲಿಂದ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದಳು. ಆದರೆ ಆಕೆಯ ಪ್ರಯತ್ನ ವಿಫಲವಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಮಹಿಳೆ ಮಾನಸಿಕ ಅಸ್ವಸ್ಥೆಯಾಗಿರುವ ಸಾಧ್ಯತೆಯೂ ಇದ್ದು, ಆಕೆಯ ವೈದ್ಯಕೀಯ ತಪಾಸಣೆಗಾಗಿ ಹ್ಯಾರಿಸ್ ಹೆಲ್ತ್ ಬೆನ್ ಟೌಬ್ ಆಸ್ಪತ್ರೆಯ ನ್ಯೂರೋಸೈಕಿಯಾಟ್ರಿಕ್ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂದು ಹೂಸ್ಟನ್ ಪೊಲೀಸ್ ಇಲಾಖೆ ತಿಳಿಸಿದೆ. ಸದ್ಯಕ್ಕೆ ಆಕೆಯ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಮತ್ತು ಆಕೆಯ ಗುರುತನ್ನು ಬಹಿರಂಗಪಡಿಸಲಾಗಿಲ್ಲ.
ಪ್ರಯಾಣಿಕರೊಬ್ಬರು ಸೆರೆಹಿಡಿದ ವಿಡಿಯೋದಲ್ಲಿ, ಮಹಿಳೆ ಸಂಪೂರ್ಣವಾಗಿ ವಿವಸ್ತ್ರಳಾಗಿ ಕೂಗುತ್ತಾ ಕ್ಯಾಬಿನ್ ನಲ್ಲಿ ನಡೆಯುತ್ತಿರುವುದನ್ನು ಕಾಣಬಹುದಾಗಿದೆ.
ಆ ಮಹಿಳೆಯರು ವಿಮಾನದೊಳಗಿನ ಅಷ್ಟು ಮಕ್ಕಳ ಮುಂದೆ ಮತ್ತು ಇತರರ ಮುಂದೆ ವಿವಸ್ತ್ರಳಾಗಿ ವಿಚಿತ್ರವಾಗಿ ವರ್ತಿಸಿದ್ದಾಳೆ. ಆದರೂ ಆಕೆಯ ವಿರುದ್ಧ ಪ್ರಕರಣ ದಾಖಲಿಸದೇ ಇರುವುದು ಆಶ್ಚರ್ಯಕರ” ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.
ಆರಂಭದಲ್ಲಿ ಮಧ್ಯಾಹ್ನ ಹೊರಡಬೇಕಿದ್ದ ವಿಮಾನವು ಅಂತಿಮವಾಗಿ ಸುಮಾರು 90 ನಿಮಿಷಗಳ ವಿಳಂಬದ ಬಳಿಕ ಫೀನಿಕ್ಸ್‌ಗೆ ಹೊರಟಿತು. ಪ್ರಯಾಣಿಕರಿಗೆ ಉಂಟಾದ ತೊಂದರೆ ಮತ್ತು ಅನಾನುಕೂಲತೆಗಾಗಿ ಸೌತ್‌ವೆಸ್ಟ್ ಏರ್‌ಲೈನ್ಸ್ ಕ್ಷಮೆಯಾಚಿಸಿತು.
ಜತೆಗೆ, ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ಆದ ತೊಂದರೆಗೆ ಪರಿಹಾರವೆಂಬಂತೆ 50 ಯುಎಸ್ ಡಾಲರ್ ಪ್ರಯಾಣ ವೋಚರ್ ನೀಡಿದೆ ಎಂದು ವರದಿಯಾಗಿದೆ.