ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಮಾರ್ಚ್ 22ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2025 (IPL 2025) ಮುನ್ನ ಶುಭ ಸುದ್ದಿ ಪಡೆದಿದೆ. ಇಂಗ್ಲೆಂಡ್‌ನ ಯುವ ಆಲ್‌ರೌಂಡರ್ ಜೇಕಬ್ ಬೆಥೆಲ್ ಮುಂದಿನ ವಾರ ಭಾರತಕ್ಕೆ ಆಗಮಿಸಲು ಸಿದ್ಧರಾಗಿದ್ದಾರೆ. ಅವರು ಗಾಯಗೊಂಡಿದ್ದ ಕಾರಣ ಅಲಭ್ಯರಾಗುತ್ತಾರೆ ಎಂಬ ಸುದ್ದಿ ಇತ್ತು. ಅವೆಲ್ಲವನ್ನೂ ಮೀರಿ ಅವರು ತಂಡಕ್ಕೆ ಸೇರಲು ಸಜ್ಜಾಗಿದ್ದಾರೆ.
Great news for RCB fans ⚡⚡
— T20 Franchise Rosters (Men) (@t20tracker) March 6, 2025
Jacob Bethell is understood to be fit to start the competition following a hamstring issue that developed on the recent white-ball tour of India and will meet up with Royal Challengers Bangalore next week via @richardgibsonDM #IPL2025 pic.twitter.com/Zs8evY22Am
ಡೇಲಿ ಮೇಲ್ ಪತ್ರಿಕೆಯ ಪತ್ರಕರ್ತ ರಿಚರ್ಡ್ ಗಿಬ್ಸನ್ ಅವರ ಪ್ರಕಾರ, ಜೇಕಬ್ ಬೆಥೆಲ್ ತಮ್ಮ ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಮತ್ತು ಮುಂದಿನ ವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರಿಕೊಳ್ಳಲಿದ್ದಾರೆ.
ಆರ್‌ಸಿಬಿಗೆ ದೊಡ್ಡ ಶಕ್ತಿ
ಇಂಗ್ಲೆಂಡ್‌ನ ವೈಟ್-ಬಾಲ್ ಆಟಗಾರ ಬೆಥೆಲ್ ಭಾರತ ಪ್ರವಾಸದ ವೇಳೆ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೊಳಗಾಗಿದ್ದರು. ಇದರಿಂದಾಗಿ ಅವರ ಲಭ್ಯತೆ ಕುರಿತು ಅನುಮಾನಗಳು ಮೂಡಿದ್ದವು. ಆದರೆ ಈಗ ಅವರು ಸಂಪೂರ್ಣ ಸುಧಾರಿಸಿಕೊಂಡಿದ್ದು ಈ ತಿಂಗಳು ಐಪಿಎಲ್‌ನಲ್ಲಿ ಆಡಲು ಸಜ್ಜಾಗಿದ್ದಾರೆ.
ಆರ್‌ಸಿಬಿ ಇದುವರೆಗೆ ಅಧಿಕೃತ ಘೋಷಣೆ ನೀಡದಿದ್ದರೂ, ಡೇಲಿ ಮೇಲ್ ಪತ್ರಕರ್ತರು ನೀಡಿದ ವರದಿ ಪ್ರಕಾರ, ಬೆಥೆಲ್ ಮಾರ್ಚ್ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಆರ್‌ಸಿಬಿ ವರ್ಸಸ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪಂದ್ಯಕ್ಕೆ ಲಭ್ಯರಾಗಲಿದ್ದಾರೆ.
ಬೈಡನ್ ಕಾರ್ಸ್ ಪಾದದ ಗಾಯದಿಂದ ಹೊರಕ್ಕೆ
ಇಂಗ್ಲೆಂಡ್ ವೇಗದ ಬೌಲರ್ ಬೈಡನ್ ಕಾರ್ಸ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ (SRH)** ತಂಡ 1 ಕೋಟಿ ರೂಪಾಯಿಗೆ ಹರಾಜಿನಲ್ಲಿ ಖರೀದಿಸಿತ್ತು, ಆದರೆ ಪಾದದ ಗಾಯದಿಂದಾಗಿ ಅವರು ಮುಂಬರುವ ಐಪಿಎಲ್ ಸೀಸನ್‌ಗೆ ಲಭ್ಯವಿರುವುದಿಲ್ಲ.
ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಚೇತರಿಸಿಕೊಳ್ಳಲು ಹೆಚ್ಚಿನ ಕಸರತ್ತು ಮಾಡುತ್ತಿದ್ದಾರೆ. ಅವರು ತಮ್ಮ ತರಬೇತಿ ತೀವ್ರತೆಯನ್ನು ಹಂತ ಹಂತವಾಗಿ ಹೆಚ್ಚಿಸುತ್ತಿದ್ದಾರೆ. ಸ್ಟೋಕ್ಸ್ ಅವರ ಚೇತರಿಕೆ ಇಂಗ್ಲೆಂಡ್ ತಂಡಕ್ಕೆ ಒಳ್ಳೆಯ ಸುದ್ದಿಯಾಗಿದರೂ, ಅವರು ಐಪಿಎಲ್ 2025ನಲ್ಲಿ ಭಾಗವಹಿಸದೆ ತಮ್ಮ ಕರಿಯರ್ ವಿಸ್ತರಿಸಲು ಮತ್ತು ಮುಂದಿನ ಆಷೆಸ್ ಸರಣಿಗೆ ಗಮನಹರಿಸಲು ನಿರ್ಧರಿಸಿದ್ದಾರೆ.
ಎಬಿ ಡಿ ವಿಲಿಯರ್ಸ್ ಆಘಾತಕಾರಿ ಹೇಳಿಕೆ
ದಕ್ಷಿಣ ಆಫ್ರಿಕಾದ ದಂತಕಥೆ ಮತ್ತು ಮಾಜಿ ಆರ್‌ಸಿಬಿ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್, ಕಳೆದ ಐಪಿಎಲ್ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ಎದುರಿಸಿದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೊಹ್ಲಿ ತಂಡದ ಇತರ ಆಟಗಾರರು ವಿಫಲರಾಗಿದ್ದಾಗ ಆರ್‌ಸಿಬಿಯ ಬ್ಯಾಟಿಂಗ್ ಬಲವನ್ನು ಹೆಚ್ದಚಿಸಿ ಪ್ಲೇಆಫ್‌ಗೆ ತಲುಪಿದ್ದರು ಎಂದು ಡಿ ವಿಲಿಯರ್ಸ್ ಹೇಳಿದ್ದಾರೆ.
ಇದನ್ನೂ ಓದಿ: Donald Trump: ಕೂಡಲೇ ಉಳಿದ ಒತ್ತೆಯಾಳುಗಳ ಬಿಡುಗಡೆ ಮಾಡಿ, ಇಲ್ಲದಿದ್ದರೆ ನಿಮ್ಮ ಸಾವು ಖಚಿತ: ಹಮಾಸ್‌ಗೆ ಟ್ರಂಪ್ ವಾರ್ನಿಂಗ್!
ಕೊಹ್ಲಿಯ ಸ್ಟ್ರೈಕ್ ರೇಟ್ ಕುರಿತು ಎದುರಿಸಿದ ಟೀಕೆಯನ್ನು ತಳ್ಳಿಹಾಕಿ, ಅವರು ತಂಡಕ್ಕೆ ಅಗತ್ಯವಾದುದನ್ನೇ ಮಾಡಿದ್ದಾರೆ. ಆಟದ ಸ್ಥಿತಿಗತಿಗಳ ಪ್ರಕಾರ ಅವರು ಹೇಗೆ ಆಡಬೇಕೋ ಹಾಗೆಯೇ ಆಡಿದ್ದಾರೆಎಂದು ಹೇಳಿದ್ದಾರೆ. ಎದುರಿನ ಆಟಗಾರನನ್ನು ನಂಬಿದಾಗ, ಹೆಚ್ಚು ಮುಕ್ತವಾಗಿ ಆಡುತ್ತಾರೆ. ಆದರೆ ಇನಿಂಗ್ಸ್ ಅನ್ನು ನಿರ್ವಹಿಸುವ ಹೊಣೆ ತಮಗಿದ್ದಾಗ ಸ್ಥಿರವಾಗಿ ಆಡುತ್ತಾರೆ” ಎಂದು ಡಿ ವಿಲಿಯರ್ಸ್ ಜಿಯೋಹಾಟ್‌ಸ್ಟಾರ್‌ನಲ್ಲಿ ಹೇಳಿದ್ದಾರೆ.