ಬೆಂಗಳೂರು: ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 4ನೇ ಸ್ಥಾನಕ್ಕೇರಿದ್ದಾರೆ. ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ಗೆ ಅರ್ಹತೆ ಪಡೆಯಲು ಭಾರತಕ್ಕೆ ನೆರವಾಗಿರುವ 36 ವರ್ಷದ ಆಟಗಾರ ಈ ಪ್ರಗತಿಯನ್ನು ಸಾಧಿಸಿದ್ದಾರೆ. ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಸೆಮಿಫೈನಲ್ನಲ್ಲಿ ಕೊಹ್ಲಿ 98 ಎಸೆತಗಳಲ್ಲಿ ಐದು ಬೌಂಡರಿಗಳ ಸಹಾಯದಿಂದ 84 ರನ್ ಗಳಿಸಿದ ನಂತರ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡಿದ್ದರು.
ಕೊಹ್ಲಿ ಪ್ರಸ್ತುತ ಪಂದ್ಯಾವಳಿಯಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ, ನಾಲ್ಕು ಇನ್ನಿಂಗ್ಸ್ಗಳಿಂದ 72.33 ಸರಾಸರಿ ಮತ್ತು 83.14 ಸ್ಟ್ರೈಕ್ ರೇಟ್ಸ್ನಲ್ಲಿ 217 ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಜೇಯ 100 ರನ್ ಗಳಿಸಿದ ನಂತರ ಕೊಹ್ಲಿ ಅಗ್ರ ಐದು ಸ್ಥಾನಗಳಲ್ಲಿ ತಮ್ಮ ಸ್ಥಾನ ಮರಳಿ ಪಡೆದರು.
Virat Rises to No.4 in odi rankings
— cricmawa (@cricmawa) March 5, 2025
Rohits slips 2 positions
Gill remains as no.1 odi batter pic.twitter.com/XEn7UOiN93
ಭಾರತದ ನಾಯಕ ರೋಹಿತ್ ಶರ್ಮಾ ಎರಡು ಸ್ಥಾನ ಕುಸಿದು 5ನೇ ಸ್ಥಾನ ಪಡೆದಿದ್ದಾರೆ. ಹೆನ್ರಿಚ್ ಕ್ಲಾಸೆನ್ 3ನೇ ಸ್ಥಾನದಲ್ಲಿದ್ದರೆ, ಶುಬ್ಮನ್ ಗಿಲ್ ಹಾಗೂ ಬಾಬರ್ ಅಜಮ್ 2ನೇ ಸ್ಥಾನದಲ್ಲಿದ್ದಾರೆ. ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ವಿರುದ್ಧ 177 ರನ್ ಗಳಿಸಿದ ಅಫ್ಘಾನಿಸ್ತಾನದ ಇಬ್ರಾಹಿಂ ಝದ್ರನ್ 13 ಸ್ಥಾನ ಮೇಲಕ್ಕೇರಿ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.
ಬ್ಯಾಟರ್ಗಳ ಐಸಿಸಿ ಏಕದಿನ ಶ್ರೇಯಾಂಕ ಇಲ್ಲಿದೆ
- ಶುಬ್ಮನ್ ಗಿಲ್ (ಭಾರತ) – 791
- ಬಾಬರ್ ಅಜಮ್ (ಪಾಕಿಸ್ತಾನ) – 770
- ಹೆನ್ರಿಕ್ ಕ್ಲಾಸೆನ್ (ದಕ್ಷಿಣ ಆಫ್ರಿಕಾ) – 760
- ವಿರಾಟ್ ಕೊಹ್ಲಿ (ಭಾರತ) – 747
- ರೋಹಿತ್ ಶರ್ಮಾ (ಭಾರತ) – 745
- ಹ್ಯಾರಿ ಟೆಕ್ಟರ್ (ಐರ್ಲೆಂಡ್) – 713
- ಡ್ಯಾರಿಲ್ ಮಿಚೆಲ್ (ನ್ಯೂಜಿಲೆಂಡ್) – 705
ಐಸಿಸಿ ಏಕದಿನ ಆಲ್ರೌಂಡರ್ಗಳ ಪಟ್ಟಿಯಲ್ಲಿ ಅಕ್ಷರ್ ಪಟೇಲ್ 17 ಸ್ಥಾನ ಜಿಗಿದು 13ನೇ ಸ್ಥಾನಕ್ಕೇರಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅಕ್ಷರ್ ನಾಲ್ಕು ಪಂದ್ಯಗಳಿಂದ 26.66 ಸರಾಸರಿಯಲ್ಲಿ 80 ರನ್ ಗಳಿಸಿದ್ದಾರೆ ಮತ್ತು 4.51 ಎಕಾನಮಿ ರೇಟ್ನಲ್ಲಿ ಐದು ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: IPL 2025: ಏಪ್ರಿಲ್ 6ರ ಎಲ್ಎಸ್ಜಿ- ಕೆಕೆಆರ್ ಪಂದ್ಯಕ್ಕೆ ಭದ್ರತಾ ವ್ಯವಸ್ಥೆಗಳ ಅಡಚಣೆ; ಕಾರಣವೇನು?
ಅಫ್ಘಾನಿಸ್ತಾನದ ಆಲ್ರೌಂಡರ್ ಅಜ್ಮತುಲ್ಲಾ ಒಮರ್ಜೈ ಕ್ರಿಕೆಟ್ ಜಗತ್ತಿನಲ್ಲಿ ವೇಗವಾಗಿ ದಾಪುಗಾಲು ಹಾಕುತ್ತಲೇ ಇದ್ದಾರೆ. 2024 ರ ಐಸಿಸಿ ಏಕದಿನ ಕ್ರಿಕೆಟರ್ ಆಫ್ ದಿ ಇಯರ್ ಆದ ನಂತರ, ಒಮರ್ಜೈ 50 ಓವರ್ಗಳ ಸ್ವರೂಪದಲ್ಲಿ ವಿಶ್ವದ ನಂ.1 ಆಲ್ರೌಂಡರ್ ಆಗಿದ್ದಾರೆ, ಅವರು 40 ವರ್ಷದ ಮೊಹಮ್ಮದ್ ನಬಿ ಅವರನ್ನು ಹಿಂದಿಕ್ಕಿದ್ದಾರೆ.
ದುಬೈನಲ್ಲಿ ಭಾರತ ವಿರುದ್ಧ ಐದು ವಿಕೆಟ್ ಪಡೆದ ನ್ಯೂಜಿಲೆಂಡ್ನ ಮ್ಯಾಟ್ ಹೆನ್ರಿ ಬೌಲಿಂಗ್ ಶ್ರೇಯಾಂಕದಲ್ಲಿ 3 ನೇ ಸ್ಥಾನಕ್ಕೆ ಏರಿದ್ದಾರೆ. ಬಾಂಗ್ಲಾದೇಶ ವಿರುದ್ಧ 5 ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ 4 ಪಂದ್ಯಗಳಿಂದ 8 ವಿಕೆಟ್ ಪಡೆದು 11ನೇ ಸ್ಥಾನಕ್ಕೇರಿದ್ದಾರೆ.