ಬೆಂಗಳೂರು: ಎದ್ದೇಳು ಮಂಜುನಾಥ್ 2 ಸಿನಿಮಾಗೆ ಸದ್ಯಕ್ಕೆ ರಿಲೀಸ್ ಭಾಗ್ಯ ಇಲ್ಲ ಎನ್ನಲಾಗುತ್ತಿದೆ. ಸಿನಿಮಾ ರಿಲೀಸ್ ಮಾಡದಂತೆ ಹೈಕೋರ್ಟ್ ನಿಂದ ಸ್ಟೇ ತಂದಿದ್ದು, ಸಂಕಷ್ಟಕ್ಕೆ ಕಾರಣವಾಗುತ್ತಿದೆ.
ಸಿನಿಮಾ ಬಿಡುಗಡೆ ಮಾಡದಂತೆ ದಿ. ಗುರುಪ್ರಸಾದ್ ಪತ್ನಿಯಿಂದ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯದಲ್ಲಿ ಸ್ಪೇ ಸಿಕ್ಕಿದೆ. ಹೈ ಕೋರ್ಟ್ ನ 26 ನೇ ಕೋರ್ಟ್ ಹಾಲ್ ಅರ್ಜಿ ವಿಚಾರಣೆ ನಡೆಸಿದೆ. ಸಂಜೀವ್ ಕುಮಾರ್ ಅವರ ನ್ಯಾಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರಕರಣ ಇತ್ಯರ್ಥ ಆಗುವವರೆಗೂ ಸಿನಿಮಾ ರಿಲೀಸ್ ಗೆ ತಡೆ ನೀಡಿದ್ದಾರೆ. ಅಲ್ಲದೇ, ಇನ್ನು ಕೇವಲ 9 ತಿಂಗಳಲ್ಲಿ ಅರ್ಜಿ ಇತ್ಯರ್ಥ ಮಾಡುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಅರ್ಜಿದಾರರ ಪರ ಹಿರಿಯ ವಕೀಲ ದಿಲೀಪ್ ಕುಮಾರ್ ಐ.ಎಸ್ ವಾದ ಮಂಡಿಸಿದ್ದರು. ವಾದ ಆಲಿಸಿದ ಹೈಕೋರ್ಟ್ ನಿಂದ ಎದ್ದೇಳು ಮಂಜುನಾಥ್ ಟು ಸಿನಿಮಾ ರಿಲೀಸ್ ಗೆ ತಡೆ ನೀಡಿದೆ.