ಬೆಂಗಳೂರು: ರಾಜ್ಯ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಎನ್. ರವಿಕುಮಾರ್ ನೇಮಕವಾಗಿದ್ದು, ಮಾಜಿ ಸಿಎಂ ಅಭಿನಂದಿಸಿದ್ದಾರೆ.
ಮುಖ್ಯ ಸಚೇತಕರಾಗಿ ರವಿಕುಮಾರ್ ನೇಮಕವಾಗಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಭಿನಂದಿಸಿದ್ದಾರೆ. ರವಿಕುಮಾರ್ ಅವರನ್ನು ಇಂದು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನಿರ್ದೇಶನದ ಮೇಲೆ ಎನ್. ರವಿಕುಮಾರ್ ಮುಖ್ಯ ಸಚೇತಕರಾಗಿ ನೇಮಕ ಮಾಡಲಾಗಿದೆ.