ಬೆಂಗಳೂರು: ದರ್ಶನ್ ಜೊತೆ ಜೈಲು ಸೇರಿದ್ದ ಡ್ರೈವರ್ ಲಕ್ಷ್ಮಣ್ ಹಾಗೂ ಮ್ಯಾನೇಜರ್ ನಾಗರಾಜ್ ಗೆ ಗೇಟ್ ಪಾಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಇಬ್ಬರನ್ನೂ ದೂರ ಇರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಈಗ ದರ್ಶನ್ ಅವರ ಎಲ್ಲ ಜವಾಬ್ಧಾರಿಗಳನ್ನು ಸ್ವತಃ ವಿಜಯಲಕ್ಷ್ಮಿ ನೋಡಿ ಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ವಕೀಲರು ಕೂಡ ಇಬ್ಬರಿಗೂ ದರ್ಶನ್ ರಿಂದ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿಯೇ ರೇಣುಕಾ ಸ್ವಾಮಿ ಕೊಲೆಗೂ ಮುಂಚೆ ದರ್ಶನ್ ಸುತ್ತ ಇದ್ದ ಹಲವರಿಗೆ ಗೇಟ್ ಪಾಸ್ ನೀಡಲಾಗಿದೆಯಂತೆ.
ಆರೋಪಿ ವಿನಯ್ ಗೂ ಗೇಟ್ ಪಾಸ್ ಸಿಕ್ಕಿದ್ದು, ಪವಿತ್ರಾಗೌಡರಿಂದಲೂ ಅಂತರ ಕಾಯ್ದುಕೊಳ್ಳಲು ಸೂಚಿಸಿದ್ದಾರೆ. ಸದ್ಯ ದರ್ಶನ್ ಸಿನಿಮಾ ಕೆಲಸ ಆರಂಭಿಸುವವರೆಗೂ ದರ್ಶನ್ ಗೆ ಮ್ಯಾನೇಜರ್ ಇರಲ್ಲ. ಯಾರಾದರೂ ದರ್ಶನ್ ಭೇಟಿ ಮಾಡಬೇಕು ಅಂದರೆ, ವಿಜಯಲಕ್ಷ್ಮಿ, ದಿನಕರ್ ಮೂಲಕ ಸಂಪರ್ಕಿಸಬೇಕು. ದರ್ಶನ್ ವಿಚಾರದಲ್ಲಿ ಮೊದಲಿನಂತೆ ಏನೂ ನಡೆಯಲ್ಲ ಎಂದು ಆಪ್ತ ಮೂಲಗಳು ಹೇಳಿವೆ.