ಬೆಂಗಳೂರು: ಇಂಧನ ಇಲಾಖೆಗೆ ಸರ್ಕಾರಿ ಸಂಸ್ಥೆಗಳಿಂದ ಕೋಟಿ, ಕೋಟಿ ಬಾಕಿ ವಿದ್ಯುತ್ ಬಿಲ್ ಬರಬೇಕಿದೆ.
ಸರ್ಕಾರಿ ಇಲಾಖೆಗಳೇ ಸಾವಿರಾರು ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿವೆ. ಬಡವರ ಮನೆಯ ಕರೆಂಟ್ ಬಿಲ್ ಕಟ್ಟದಿದ್ದರೆ ಕರೆಂಟ್ ಕಟ್ ಮಾಡಲಾಗುತ್ತದೆ. ಆದರೆ, ಇಲಾಖೆಗಳಲ್ಲಿ ಕರೆಂಟ್ ಬಿಲ್ ಇಷ್ಟೊಂದು ದೊಡ್ಡ ಮೊತ್ತದಲ್ಲಿ ಬಾಕಿ ಇದ್ದರೂ ಇಂಧನ ಇಲಾಖೆ ಮೌನ ವಹಿಸಿದ್ದೇಕೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಅದರೆ, ಸರ್ಕಾರಿ ಇಲಾಖೆಗಳ ಸಾವಿರಾರು ಕೋಟಿ ಬಾಕಿ ಇದ್ದರೂ ಇಲಾಖೆಗಳಿಗೆ ಕಟ್ಟಲು ಏಕೆ ಆಗುತ್ತಿಲ್ಲ? ಸರ್ಕಾರವು ಬಿಲ್ ಕಟ್ಟಲು ಕೂಡ ಆಗದಷ್ಟು ಬಡವಾಯಿತೇ? ಎಂದು ಸಾಮಾನ್ಯ ಜನರು ಪ್ರಶ್ನಿಸುತ್ತಿದ್ದಾರೆ.
ಯಾವ ಇಲಾಖೆಯಿಂದ ಎಷ್ಟು ಬಿಲ್ ಬಾಕಿ ಇದೆ?
- ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ- 4106 ಕೋಟಿ ರೂ.
- ನಗರಾಭಿವೃದ್ಧಿ ಇಲಾಖೆ -2313 ಕೋಟಿ ರೂ.
- ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ- 353 ಕೋಟಿ ರೂ.
- ನೀರಾವರಿ ಇಲಾಖೆ- 1085 ಕೋಟಿ ರೂ.
- ಸಣ್ಣ ನೀರಾವರಿ ಇಲಾಖೆ- 126 ಕೋಟಿ ರೂ.
- ಅರೋಗ್ಯ ಇಲಾಖೆ- 33 ಕೋಟಿ ರೂ.
- ಇನ್ನಿತರ 30 ಸರ್ಕಾರಿ ಇಲಾಖೆಗಳಿಂದ-90 ಕೋಟಿ ರೂ.