ಬಾಗಲಕೋಟೆ: ಬಿಸಿ ಹುಗ್ಗಿಯಲ್ಲಿ ಕೈ ಹಾಕಿದ ಭಕ್ತರು ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ.
ಕುದಿಯುವ ಹುಗ್ಗಿಯನ್ನು ಬರಿಗೈಯಿಂದ ತೆಗೆದು ಭಕ್ತರು ಭಕ್ತಿಯ ಪರಾಕಾಷ್ಠೆ ಮೆರೆದಿರುವ ಈ ಘಟನೆ ಜಿಲ್ಲೆಯ ಗೋವಿನಕೊಪ್ಪ ಗ್ರಾಮದಲ್ಲಿ ನಡೆದಿದೆ. ಬಿಸಿ ಹುಗ್ಗಿಯಲ್ಲಿ ಕೈ ಹಾಕಿ ಪಲ್ಲಕ್ಕಿ ಹೊತ್ತ ಪೂಜಾರಿಗಳು ಹುಗ್ಗಿ ತೆಗೆದಿದ್ದಾರೆ.
ಗೋವಿನಕೊಪ್ಪ ಗ್ರಾಮದ ಬೀರಲಿಂಗೇಶ್ವರ ಜಾತ್ರೆಯಲ್ಲಿ ಭಕ್ತರು ಈ ರೀತಿ ಕುದಿಯುವ ಹುಗ್ಗಿಯಲ್ಲಿ ಕೈ ಹಾಕಿದ್ದಾರೆ. ಕುದಿಯುವ ಹುಗ್ಗಿಯ ಬೃಹತ್ ಪಾತ್ರೆಯಲ್ಲಿ ಕೈಹಾಕಿದ ಪೂಜಾರಿಗಳು ದೇವರಿಗೆ ನೈವೇದ್ಯ ತೆಗೆದಿದ್ದಾರೆ. ದೈವದ ಮೇಲಿನ ನಂಬಿಕೆಗೆ ಈ ಜಾತ್ರೆ ಸಾಕ್ಷಿಯಾಗಿದ್ದು, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿ, ಪೂಜೆ ಸಲ್ಲಿಸಿದ್ದಾರೆ.