ಬೆಂಗಳೂರು: ಮಾರ್ಚ್ 22ರಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಬೆಂಬಲ ಇಲ್ಲ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಅವರು, ಪ್ರತಿಷ್ಠಿಗೆ ನಡೆಯುವ ಬಂದ್ ಗೆ ನಮ್ಮ ಬೆಂಬಲ ಇಲ್ಲ. ವಾಟಳ್ ನಾಗರಾಜ್ ಅವರ ಮೇಲೆ ನನಗೆ ತುಂಬಾ ಗೌರವ ಇದೆ. ಅವರು ಈ ಹಿಂದೆ ಹಲವು ಬಂದ್ ಮಾಡಿದ್ದಾರೆ. ಯಾವುದೂ ಯಶಸ್ವಿ ಆಗಿಲ್ಲ. ಬಂದ್ ನಿಂದ ಸರ್ಕಾರಕ್ಕೆ, ಜನರಿಗೆ ಲಾಸ್ ಆಗಲಿದೆ.
ಸದ್ಯ ಗಡಿ ವಿಚಾರ ಎಲ್ಲವೂ ಮುಗಿದಿದೆ. ಬಂದ್ ಮಾಡಲು ವಿಚಾರ ಇರಬೇಕು. ಎಲ್ಲದಕ್ಕೂ ಬಂದ್ ಅಂತಾ ಹೇಳಿದರೆ ಹೇಗೆ? ಎಂದು ಪ್ರಶ್ನಿಸಿದ ಅವರು, ಹಿಂದೆ ಬಂದ್ ಮಾಡಿದರೆ ಸರ್ಕಾರ ಹೆದರುತ್ತಿತ್ತು. ಆದರೆ, ಈಗ ಎಲ್ಲದಕ್ಕೂ ಬಂದ್ ಅಂತಾ ಹೇಳುವುದು ಸರಿಯಲ್ಲ.
ಬೇಕಾದರೆ ಮಹಾರಾಷ್ಟ್ರಕ್ಕೆ ಹೋಗಿ ಹೋರಾಟ ಮಾಡೋಣ ಬನ್ನಿ. ನಾನು ಕೂಡ ರೆಡಿಯಾಗಿದ್ದೇನೆ. ಆದರೆ, ಬಂದ್ ಗೆ ಬೆಂಬಲ ಇಲ್ಲ. ಬದಲಾಗಿ ಮಾರ್ಚ್ 10ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಒಂದು ಲಕ್ಷ ಕರವೇ ಕಾರ್ಯಕರ್ತರು ರಕ್ತದಲ್ಲಿ ಪತ್ರ ಬರೆದು ಸಿಎಂ ಹಾಗೂ ರಾಜ್ಯಪಾಲರಿಗೆ ಮಾನವಿ ಮಾಡುತ್ತೇವೆ ಎಂದಿದ್ದಾರೆ.