ವಿಜಯಪುರ: ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಶಿವರಾತ್ರಿ ಕಾರ್ಯಕ್ರಮಕ್ಕೆ ಹೋಗಿದ್ದಕ್ಕೆ ಹಲವರು ಹಲವು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಈಗ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಹಿಂದೂ ಅಲ್ವಾ ಎಂದು ಪ್ರಶ್ನಿಸಿದ ಅವರು, ಶಿವರಾತ್ರಿಗೆ ಹೋದರೆ ಏನಾಗುತ್ತದೆ. ಶಿವರಾತ್ರಿ ಆಚರಿಸುವುದು ಪಕ್ಷದ ವಿರುದ್ಧ ಆಗುತ್ತಾ? ಅದು ಅವರ ವೈಯಕ್ತಿಕ ವಿಚಾರ. ನನ್ನ ವೈಯಕ್ತಿಕ ಅಸ್ಮಿತೆ, ನನ್ನ ವೈಯಕ್ತಿಕ ಆಚರಣೆ ಅದು ಬೇರೆ ಎಂದು ಹೇಳಿದ್ದಾರೆ.
ಪಕ್ಷಕ್ಕೆ ಸಿದ್ದಾಂತ ಇರುತ್ತದೆ. ನಾನು ಶಿವರಾತ್ರಿಗೆ ಲಿಂಗದ ಗುಡಿಗೆ ಹೋಗಿದ್ದೆ. ಶಿವಗಿರಿಗೆ ಹೋಗಿದ್ದೆ. ಅಮಿತ್ ಶಾ ಅವರ ಜೊತೆಯಲ್ಲಿ ಡಿಕೆಶಿ ಅವರು ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗಿ ಆದರೆ ಏನು ತಪ್ಪಿದೆ. ಅನೇಕ ಕಾರ್ಯಕ್ರಮಗಳಲ್ಲಿ ನಮ್ಮನ್ನೂ ಕರೆದಿರುತ್ತಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.