ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಪಾಕಿಸ್ತಾನದಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಅಕೋರಾ ತಕ್ತಕ್ ಜಿಲ್ಲೆಯಲ್ಲಿ ಬಾಂಬ್ ಸ್ಫೋಟಗೊಂಡಿದೆ. ಈ ಘಟನೆಯು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಡೆಸುತ್ತಿರುವ ಈ ಟೂರ್ನಿಯ ಭದ್ರತೆ ಕುರಿತು ಪ್ರಶ್ನೆಗೆ ಕಾರಣವಾಗಿದೆ. ಕ್ರಿಕೆಟಿಗರು ಇದರಿಂದ ಭಯಭೀತರಾಗಿದ್ದಾರೆ ಎಂದು ವರದಿಯಾಗಿದೆ. 1996ರ ವಿಶ್ವಕಪ್ ನಂತರ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮೊದಲ ಪ್ರಮುಖ ಐಸಿಸಿ ಟೂರ್ನಿ ಇದಾಗಿರುವ ಕಾರಣ ಆತಂಕ ಸೃಷ್ಟಿಯಾಗಿದೆ.
ಟೂರ್ನಿಯು ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿಯಲ್ಲಿ ನಡೆಯತ್ತಿದ್ದು , ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಪಾಕಿಸ್ತಾನ ಆಡಲು ಭಾರತ ತಂಡದ ಅವಕಾಶ ಕೊಡಲಿಲ್ಲ.
ಭಾರತೀಯ ತಂಡ ಪಾಕಿಸ್ತಾನದಲ್ಲಿ ಯಾವುದೇ ಪಂದ್ಯಗಳನ್ನು ಆಡುವುದಿಲ್ಲ ಎಂದು ನಿಖರವಾಗಿ ಹೇಳಿದ ಕಾರಣ ಎಲ್ಲ ಪಂದ್ಯಗಳು ದುಬೈ ಅಂತಾರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿವೆ. ಭಾರತ ತಂಡವು 2008ರ ಏಷ್ಯಾ ಕಪ್ ಬಳಿಕ ಪಾಕಿಸ್ತಾನದಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಆಡಿಲ್ಲ.
ಬಾಂಬ್ ಸ್ಫೋಟ, ಹಲವರಿಗೆ ಗಾಯ
ಪಾಕಿಸ್ತಾನದ ಖೈಬರ್ ಪಂಖ್ವುಕ್ವಾ ಪ್ರಾಂತ್ಯದ ಅಕೋರಾ ಖಟ್ಟಕ್‌ನಲ್ಲಿ ತಾಲಿಬಾನ್ ಪ್ರೇರಿತ ಮದರಸಾದ ಒಳಗಡೆ ಬಲಶಾಲಿ ಬಾಂಬ್ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಕನಿಷ್ಟ ಐದು ಮಂದಿ ಬಲಿಯಾಗಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಂಜಾನ್ ಪ್ರಾರಂಭ ಮುನ್ನಾದಿನವೇ ಈ ಸ್ಫೋಟ ನಡೆದಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾಂಬ್ ಸ್ಫೋಟ ನಡೆದ ಸ್ಥಳ ಲಾಹೋರ್‌ನಿಂದ ಕೇವಲ 600 ಕಿಮೀ ದೂರದಲ್ಲಿದ್ದು ಈ ವೇಳೆ ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯ ನಡೆಯುತ್ತಿತ್ತು.
ಪಾಕಿಸ್ತಾನದ ಗೃಹ ಸಚಿವ ಮತ್ತು ಪಿಸಿಬಿ ಅಧ್ಯಕ್ಷ ಮೋಹ್ಸಿನ್ ನಕ್ವಿ ಈ ಬಾಂಬ್ ಸ್ಫೋಟವನ್ನು ತೀವ್ರವಾಗಿ ಖಂಡಿಸಿದ್ದಾರೆ. v ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಗಾಯಗೊಂಡವರ ಚೇತರಿಕೆಗಾಗಿ ಪ್ರಾರ್ಥಿಸಿದ್ದಾರೆ.
ಪಾಕಿಸ್ತಾನ ತಂಡದ ವಿಫಲ ಪ್ರದರ್ಶನ
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ ಮೊಹಮ್ಮದ್ ರಿಜ್ವಾನ್ ಅವರಿಗೆ ಬೇಸರ ಉಂಟಾಗಿದೆ. ಅವರ ನಾಯಕತ್ವದಲ್ಲಿ ತಂಡ ನಿರಾಶಾದಾಯಕ ವಪ್ರದರ್ಶನ ನೀಡಿದೆ. ಪಾಕಿಸ್ತಾನ ತಮ್ಮ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 60 ರನ್‌ಗಳಿಂದ ಸೋತು. ಭಾರತ ವಿರುದ್ಧದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಮಣಿದಿತ್ತು.
ಗ್ರೂಪ್ ಎ ನಲ್ಲಿ ಪಾಕಿಸ್ತಾನ ತಂಡ ಯಾವುದೇ ಗೆಲುವು ಕಾಣದೆ ಹೊರಕ್ಕೆ ನಡೆಯಿತು. -1.087 ನೇಟ್ ರನ್ ರೇಟ್‌ನೊಂದಿಗೆ ಬಾಂಗ್ಲಾದೇಶಕ್ಕಿಂತ ಕೆಳಗಿನ ಸ್ಥಾನದಲ್ಲಿ ಇರುವ ಮೂಲಕ ಮುಖಭಂಗ ಅನುಭವಿಸಿತು.