ಕರ್ನಾಟಕದ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಸುಮಾರು 9,935 ಹುದ್ದೆಗಳ ನೇಮಕಾತಿಗೆ ಸರ್ಕಾರ ಮುಂದಾಗಿದೆ. ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯಪತ್ರದ ಮೂಲಕ ಪ್ರಕ್ರಿಯೆ ಕುರಿತು ಸಂಪೂರ್ಣ ನಿಯಮಾವಳಿಗಳನ್ನು ಹೊರಡಿಸಿದೆ. ವಿವಿಧ ಹುದ್ದೆಗಳಿಗಾಗಿ ಆಕ್ಷೇಪಣೆಗಳನ್ನು ಸ್ವೀಕರಿಸಿದ ಬಳಿಕ ರಾಜ್ಯ ಸರ್ಕಾರವು ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆದೇಶ ಹೊರಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಪ್ರಾಂಶುಪಾಲರು, ಮುಖ್ಯಸ್ಥರು, ಆಯುಕ್ತರು, ನಿರ್ದೇಶಕರು, ಉಪನ್ಯಾಸಕರು, ಎಫ್ಡಿಎ, ಎಸ್ಡಿಎ, ಗ್ರೂಪ್ ಸಿ, ಗ್ರೂಪ್ ಡಿ ಹಲವು ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತದೆ. ಕೆಲವು ಹುದ್ದೆಗಳನ್ನು ಪರೀಕ್ಷೆ, ಇನ್ನೂ ಕೆಲವು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯಾ ಹುದ್ದೆಗಳಿಗೆ ತಕ್ಕಂತೆ, ಮಾಸಿಕ 27 ಸಾವಿರ ರೂ.ನಿಂದ 2.18 ಲಕ್ಷ ರೂ.ವರೆಗೆ ಸಂಬಳ ಇರಲಿದೆ. ಈಗ ನಿಯಮಗಳನ್ನು ಮಾತ್ರ ಹೊರಡಿಸಲಾಗಿದ್ದು, ಶೀಘ್ರದಲ್ಲೇ ಅಂತಿಮ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.
ಒಟ್ಟು 9,935 ಹುದ್ದೆಗಳು
ಇವುಗಳ ಜತೆಗೆ ಇನ್ನೂ ಹಲವು ಹುದ್ದೆಗಳು ಸೇರಿ ಒಟ್ಟು 9,935 ಹುದ್ದೆಗಳ ಭರ್ತಿಗೆ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. ರಾಜ್ಯಾದ್ಯಂತ ಇರುವ ಉನ್ನತ ಶಿಕ್ಷಣ ಇಲಾಖೆ ಅಧೀನದ ಕಾಲೇಜುಗಳು, ಕಚೇರಿಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆದರೆ ಎಲ್ಲ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ನೇಮಕ ಮಾಡುವುದಿಲ್ಲ ಎಂಬುದು ಪ್ರಮುಖ ಸಂಗತಿಯಾಗಿದೆ. ಆದರೆ ಉಪನ್ಯಾಸಕರು, ಎಫ್ ಡಿಎ, ಎಸ್ ಡಿಎ, ಗ್ರೂಪ್ ಸಿ ಹುದ್ದೆಗಳಿಗೆ ಅಧಿಸೂಚನೆಗಳ ಸಾಧ್ಯತೆ ಹೆಚ್ಚಿದ್ದು, ಸದರಿ ಹುದ್ದೆಗಳಿಗೆ ಅರ್ಹತೆ ಇರುವವರು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳುವುದು ಒಳಿತು.
ಯಾವ ಹುದ್ದೆಗಳು ಎಷ್ಟು ಖಾಲಿ?
ಸೂಪರಿಂಟೆಂಡೆಂಟ್: 281
ಆಯುಕ್ತರು : 1
ತಾಂತ್ರಿಕ ಶಿಕ್ಷಣ ನಿರ್ದೇಶಕರು : 1
ಹೆಚ್ಚುವರಿ ತಾಂತ್ರಿಕ ಶಿಕ್ಷಣ ನಿರ್ದೇಶಕರು (ಇಸಿ) : 1
ಹೆಚ್ಚುವರಿ ತಾಂತ್ರಿಕ ಶಿಕ್ಷಣ ನಿರ್ದೇಶಕರು (ಪಾಲಿಟೆಕ್ನಿಕ್) : 1
ಜಂಟಿ ನಿರ್ದೇಶಕರು (ಅಡ್ಮಿನ್): 1
ಜಂಟಿ ನಿರ್ದೇಶಕರು ತಾಂತ್ರಿಕ ಶಿಕ್ಷಣ: 2
ಪ್ರಾಂಶುಪಾಲರು, ಸರ್ಕಾರಿ ಪಾಲಿಟೆಕ್ನಿಕ್ (ಎಂಜಿನಿಯರಿಂಗ್): 75
ಪ್ರಾಂಶುಪಾಲರು, ಸರ್ಕಾರಿ ಪಾಲಿಟೆಕ್ನಿಕ್ ( ನಾನ್ ಎಂಜಿನಿಯರಿಂಗ್): 6
ಅಸೋಸಿಯೇಟ್ ಪ್ರೊಫೆಸರ್ (ಇಸಿ): 131
ಹೆಡ್ (ಡಿಪಾರ್ಟ್ಮೆಂಟ್ ಎಂಜಿನಿಯರಿಂಗ್ / ಟೆಕ್ನಾಲಜಿ) : 333
ಹೆಡ್ (ನಾನ್ ಎಂಜಿನಿಯರಿಂಗ್, ಸರ್ಕಾರಿ ಪಾಲಿಟೆಕ್ನಿಕ್): 24
ಹೆಡ್ ಆಫ್ ಡಿಪಾರ್ಟ್ಮೆಂಟ್ – ಮಾನವಿಕ ಮತ್ತು ವಿಜ್ಞಾನ: 427
ಆಡಳಿತಾತ್ಮಕ ಅಧಿಕಾರಿ: 01
ಅಸಿಸ್ಟಂಟ್ ಪ್ರೊಫೆಸರ್ ಎಂಜಿನಿಯರಿಂಗ್ ಕಾಲೇಜುಗಳು : 359
ಲೈಬ್ರರಿಯನ್ ಎಂಜಿನಿಯರಿಂಗ್ ಕಾಲೇಜುಗಳು: 10
ಅಸಿಸ್ಟಂಟ್ ಡೈರೆಕ್ಟರ್ ಆಫ್ ಫಿಸಿಕಲ್ ಎಜುಕೇಷನ್ ಅಂಡ್ ಸ್ಪೋರ್ಟ್ಸ್: 9
ಎಂಜಿನಿಯರಿಂಗ್ ವಿಷಯಗಳ ಉಪನ್ಯಾಸಕರು : 2042
ನಾನ್ – ಎಂಜಿನಿಯರಿಂಗ್ ಉಪನ್ಯಾಸಕರು : 125
ಮಾನವಿಕ ಮತ್ತು ವಿಜ್ಞಾನ ವಿಷಯಗಳ ಉಪನ್ಯಾಸಕರು: 14
ಅಕೌಂಟ್ ಆಫೀಸರ್: 3
ಟೆಕ್ನಿಕಲ್ ಆಫೀಸರ್ : 12
ಪ್ರೋಗ್ರಾಮರ್ : 1
ಪ್ರಾಂಶುಪಾಲರು, ಜೂನಿಯರ್ ಟೆಕ್ನಿಕಲ್ ಸ್ಕೂಲ್ಸ್: 6
ಲೈಬ್ರರಿಯನ್ (ಗ್ರೂಪ್ ಬಿ): 1
ಸ್ಟ್ಯಾಟಿಸ್ಟೀಷಿಯನ್ : 1
ಕ್ಯಾಮೆರಾಮನ್: 1
ಸೌಂಡ್ ರೆಕಾರ್ಡಿಸ್ಟ್: 1
ಅಸೋಸಿಯೇಟ್ ಪ್ರೊಫೆಸರ್: 131
ಮುಖ್ಯಸ್ಥ (ನಾನ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ವಿಭಾಗ) : 24
ಫೋರ್ ಮ್ಯಾನ್ : 91
ಗ್ರಂಥಾಪಾಲಕರು: 31
ಇನ್ ಸ್ಟ್ರಕ್ಟರ್: 459
ಪ್ರಥಮ ದರ್ಜೆ ಸಹಾಯಕರು: 512
ಸ್ಟೆನೋಗ್ರಾಫರ್: 22
ಅಸಿಸ್ಟಂಟ್ ಇನ್ಸ್ಟ್ರಕ್ಟರ್: 487
ಮೆಕ್ಯಾನಿಕ್ಸ್ : 923
ಸೆಕೆಂಡ್ ಡಿವಿಷನ್ ಅಸಿಸ್ಟಂಟ್: 474
ಡಾಟಾ ಎಂಟ್ರಿ ಅಸಿಸ್ಟಂಟ್: 144
ಡ್ರೈವರ್: 89
ಅಸಿಸ್ಟಂಟ್ ಕುಕ್: 21
ಸಹಾಯಕರು: 1241
ಆಫೀಸ್ ಅಟೆಂಡರ್: 164
ಹೆಡ್ ಕುಕ್( ಹಾಸ್ಟೆಲ್): 21
ಗ್ರೂಪ್ ಡಿ (ಜವಾನ, ವಾಚ್ ಮ್ಯಾನ್, ಸ್ವೀಪರ್ ಗಳು): 939