ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗಗನಚುಂಬಿ ಕಟ್ಟಡಗಳು ತಲೆ ಎತ್ತುತ್ತಲೇ ಇವೆ. ದಾಖಲೆಗಳನ್ನು ಪಕ್ಕಾ ಪರಿಶೀಲನೆ ಮಾಡಿ ಪ್ರತಿಯೊಬ್ಬರು ಮನೆ ಖರೀದಿಸುತ್ತಿರುತ್ತಾರೆ. ಆದರೆ, ಈಗ ದಾಖಲೆ ಸರಿ ಇದ್ದರೂ ದಂಡ ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ ದಾಖಲೆಯೊಂದಿಗೆ ಬಿಬಿಎಂಪಿಯ ಈ ಹೊಸ ರೂಲ್ಸ್ ನ್ನು ಕೂಡ ನೋಡಬೇಕಿದೆ.
ಬೆಂಗಳೂರಿನಲ್ಲಿ ತಲೆ ಎತ್ತಲಿರುವ ಅಪಾರ್ಟ್ ಮೆಂಟ್ ಗಳಿಗೆ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಈ ಹೊಸ ನಿಯಮ ಜಾರಿ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಈ ನಿಯಮದಂತೆ ಅಪಾರ್ಟ್ ಮೆಂಟ್ ನಿರ್ಮಾಣ ಹಂತದಲ್ಲೇ ಕಾವೇರಿ ನೀರಿನ ಸಂಪರ್ಕ ಪಡೆಯುವುದು ಕಡ್ಡಾಯಗೊಳಿಸಲಾಗುತ್ತಿದೆ.
ಈ ನಿಯಮ ಜಾರಿಗೆ ತರಲು ಜಲಮಂಡಳಿ ಗಂಭೀರ ಚಿಂತನೆ ಮಾಡುತ್ತಿದೆ. ಬಿಲ್ಡರ್ಡ್ ಹಾಗೂ ಲ್ಯಾಂಡ್ ಮಾಲೀಕರಿಗೆ ಕೂಡ ಇದು ಅನ್ವಯವಾಗುವ ನಿಯಮವಾಗಿದೆ. ಅಲ್ಲದೇ, ಬೆಂಗಳೂರು ಪ್ಲಾಟ್ ಮಾರಾಟಕ್ಕೂ ಮುನ್ನ ಕಾವೇರಿ ನೀರಿನ ಸಂಪರ್ಕ ಇರುವುದು ಕಡ್ಡಾಯ ಮಾಡಲು ಚಿಂತಿಸಲಾಗುತ್ತಿದೆ.
ಪ್ಲಾಟ್ ಖರೀದಿದಾರರಿಗೆ ಬಿಲ್ಡರ್ಸ್ ಕಡೆಯಿಂದ ಆಗುವ ಮೋಸ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಜಲ ಮಂಡಳಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೊಹರ್ ಹೇಳಿದ್ದಾರೆ.
ಈ ಹಿಂದೆ ಅಪಾರ್ಟ್ ಮೆಂಟ್ ನಲ್ಲಿ ಕಾವೇರಿ ನೀರಿನ ಸಂಪರ್ಕ ಪಡೆಯುವುದು ಕಡ್ಡಾಯವಾಗಿರಲಿಲ್ಲ. ಇದೀಗ ಹೆಚ್ಚುವರಿ ನೀರು ಸಂಗ್ರಹ ನಮ್ಮಲ್ಲಿ ಇದೆ. ಅಲ್ಲದೆ ನಾವೂ ಕಾನೂನು ಬದಲಾವಣೆಗೆ ಮುಂದಾಗಿದ್ದೇವೆ. ಹೊಸ ಅಪಾರ್ಟ್ ಮೆಂಟ್ ನಿರ್ಮಾಣದ ವೇಳೆ ಕಾವೇರಿ ನೀರಿನ ಸಂಪರ್ಕ ಪಡೆಯುವುದು ಕಡ್ಡಾಯವಾಗಿದೆ. ಈ ಸಂಬಂಧ ಹೊಸ ರೆಸ್ಯುಲೂಷನ್ ಬೋರ್ಡ್ ನಲ್ಲಿ ಪಾಸ್ ಮಾಡಲಿದ್ದೇವೆ. ತದನಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.