ಬೆಂಗಳೂರು: ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ಅವರ ಮಗ ಆಕಾಶ್ ಜಗನ್ನಾಥ್ ನಾಯಕ ನಟನಾಗಿ ಗುರುತಿಸಿಕೊಂಡಿದ್ದು, ತಲ್ವಾರ್ ಚಿತ್ರದಲ್ಲಿ ಆಕ್ಷನ್-ಪ್ಯಾಕ್ಡ್ ಅವತಾರದ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಲು ಸಜ್ಜಾಗಿದ್ದಾರೆ.
ELV ಗ್ರೂಪ್ ಆಫ್ ಕಂಪನಿಸ್ ಮತ್ತು ವಾರ್ನಿಕ್ ಸ್ಟುಡಿಯೋಸ್‌ನ ಸ್ಥಾಪಕ ಮತ್ತು ಅಧ್ಯಕ್ಷ ಡಾ. ಭಾಸ್ಕರ್ ELV, ಬಿಗ್ ಬಜೆಟ್ ನಲ್ಲಿ ನಿರ್ಮಿಸಿದ ಸಿನಿಮಾವಾಗಿದೆ. ಇದೇ ತಲ್ವಾರ್ ಸಿನಿಮಾವನ್ನು ಕಾಸಿ ಪರಸುರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಇದೇ ಚಿತ್ರದ ಮೊದಲ ಗ್ಲಿಂಪ್ಸ್ ಬಿಡುಗಡೆ ಆಗಿದ್ದು, ಅಭಿಮಾನಿಗಳು ಮತ್ತು ವೀಕ್ಷಕರನ್ನು ಸೆಳೆದಿದೆ.
‘ತಲ್ವಾರ್’ ಪ್ಯಾನ್-ಇಂಡಿಯನ್ ಚಿತ್ರವಾಗಿ ನಿರ್ಮಾಣವಾಗುತ್ತಿದೆ. ಜೂನ್ ವೇಳೆಗೆ ಶೂಟಿಂಗ್ ಮುಗಿಸಿಕೊಂಡು, ಸೆಪ್ಟೆಂಬರ್- ಅಕ್ಟೋಬರ್ ವೇಳೆಗೆ ಆಡಿಯೋ ಬಿಡುಗಡೆ ಆಗಲಿದೆ. ಈ ವರ್ಷದ ಅಂತ್ಯಕ್ಕೆ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ತಲ್ವಾರ್ ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ಬೇರೆ ಬೇರೆ ಕಡೆಗಳಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ. ಮಾಸ್ ಆಕ್ಷನ್ ದೃಶ್ಯಗಳು ಕೂಡ ಚಿತ್ರದಲ್ಲಿವೆ.
ಆಕಾಶ್ ಜಗನ್ನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಪ್ರಕಾಶ್ ರಾಜ್, ಪುರಿ ಜಗನ್ನಾಥ್, ಅನಸೂಯಾ ಭಾರದ್ವಾಜ್, ಶೈನ್ ಟಾಮ್ ಚಾಕೊ, ಅಜಯ್ ಮತ್ತು ಇತರ ಹಲವಾರು ಪ್ರಮುಖ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಅಲ್ಲದೇ, ಬಾಲಿವುಡ್ ನಟರು ಕೂಡ ಈ ಚಿತ್ರದಲ್ಲಿದ್ದಾರೆ. ಈ ಚಿತ್ರವನ್ನು ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ನಿರ್ಮಿಸಲಾಗುತ್ತಿದೆ.