ಬೆಂಗಳೂರು: ಮಾರ್ಚ್ 3 ರಿಂದ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗುತ್ತಿದೆ. ಮಾರ್ಚ್ 7 ರಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಅಂದು ವ್ಹೀಲ್ ಚೇರ್ ಬಳಸಿ ಅವರು ಬಜೆಟ್ ಮಂಡಿಸಲಿದ್ದಾರೆ ಎನ್ನಲಾಗಿದೆ.
ಸಿದ್ಧರಾಮಯ್ಯ ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿಯೂ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಸದ್ಯ ಸಿಎಂ ಸಿದ್ಧರಾಮಯ್ಯರಿಗೆ ಎದುರಾಗಿರುವ ಕಾಲುನೋವಿನ ಕಾರಣ, ಕಳೆದ ಮೂರ್ನಾಲ್ಕು ವಾರಗಳಿಂದ ಕಾಲುನೋವಿನ ಹಿನ್ನೆಲೆಯಲ್ಲಿ, ವೀಲ್ ಚೇರ್ ಬಳಸಿ ಓಡಾಟ ಮಾಡುತ್ತಿದ್ದಾರೆ.
ಮಾರ್ಚ್ 3 ರಿಂದ ಆರಂಭವಾಗಲಿರುವ ಅಧಿವೇಶನಕ್ಕೂ ವ್ಹೀಲ್ ಚೇರ್ ಆಶ್ರಸಿಯೇ ಸಿದ್ಧರಾಮಯ್ಯ ಓಡಾಟ ಮಾಡಲಿದ್ದಾರೆ. ಇನ್ನು ಮಾರ್ಚ್ 7 ರಂದು ದಾಖಲೆಯ 16 ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಕರ್ನಾಟಕ ರಾಜ್ಯದ ಸದನದ ಇತಿಹಾಸದಲ್ಲಿ ಬಜೆಟ್ ಮಂಡನೆ ಮಾಡುವ ಹಣಕಾಸು ಇಲಾಖೆಯ ಸಚಿವರು ಎದ್ದು ನಿಂತು ಆಯವ್ಯಯ ಮಂಡನೆ ಮಾಡುವುದು ಸಂಪ್ರದಾಯ. ಆದರೆ, ಹಣಕಾಸು ಇಲಾಖೆಯ ಸಚಿವರೂ ಆಗಿರುವ ಸಿದ್ಧರಾಮಯ್ಯ ಈ ಬಾರಿ ಕಾಲು ನೋವಿನ ಹಿನ್ನೆಲೆಯಲ್ಲಿ, ಸಭಾಧ್ಯಕ್ಷರ ಅನುಮತಿ ಪಡೆದು ಕುಳಿತು ಆಯವ್ಯಯ ಮಂಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಸಿಎಂ ಸಿದ್ಧರಾಮಯ್ಯರಿಗೆ ಕಾಲುನೋವಿಗೆ ವೈದ್ಯರಿಂದ 6 ವಾರಗಳ ವಿಶ್ರಾಂತಿಗೆ ಸೂಚನೆ. ಈ ನಿಟ್ಟಿನಲ್ಲಿ ಸದ್ಯ ಮುಕ್ತಾಯವಾಗಿರುವುದು 4 ವಾರಗಳು ಮಾತ್ರ. ಇನ್ನೆರಡು ವಾರಗಳು ವಿಶ್ರಾಂತಿ ಬಾಕಿಯಿರುವ ಕಾರಣ. ಮುಂದಿನ ವಾರವು ವೀಲ್ ಚೇರ್‌ನಲ್ಲಿಯೇ ಸಿಎಂ ಸಿದ್ಧರಾಮಯ್ಯ ಓಡಾಟ ಮಾಡಲಿದ್ದಾರೆ ಎನ್ನಲಾಗಿದೆ.