ಭಾರತದ ಮಾಜಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಇತ್ತೀಚೆಗೆ 2013ರ ತಮ್ಮ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜಯದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ಎಂ.ಎಸ್. ಧೋನಿ ನೇತೃತ್ವದಲ್ಲಿ ಭಾರತವು ಈ ಟ್ರೋಫಿ ಗೆದ್ದ ಸಂದರ್ಭದಲ್ಲಿ, ಧವನ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2013ರಲ್ಲಿ ಆರಂಭವಾದ ರೋಹಿತ್ ಶರ್ಮಾ ಆರಂಭಿಕ ಜತೆಯಾಟ 9 ವರ್ಷಗಳ ಮುಂದುವರಿದಿತ್ತು. ಅವರು ಯಶಸ್ವಿ ಆರಂಭಿಕ ಜೋಡಿ ಎನಿಸಿಕೊಂಡಿದ್ದರು.
ರೋಹಿತ್ ಜತೆ ಮೊದಲ ಬಾರಿಗೆ ಇನಿಂಗ್ಸ್ ಓಪನ್ ಮಾಡಿದ ಕ್ಷಣವನ್ನು ಮೆಲುಕು ಹಾಕಿದ ಧವನ್, ಈ ನಿರ್ಧಾರವನ್ನು ಪಂದ್ಯದ ದಿನದ ಹಿಂದೆಯೇ ಧೋನಿ ತೆಗೆದುಕೊಂಡಿದ್ದರು ಎಂದಿದ್ದಾರೆ. ಅದಾದ ನಂತರ, ಈ ಜೋಡಿ ಭಾರತದ ವೈಟ್-ಬಾಲ್ ಕ್ರಿಕೆಟ್‌ನ ಅತ್ಯಂತ ಯಶಸ್ವೀ ಓಪನಿಂಗ್ ಜೋಡಿಗಳಲ್ಲೊಂದು ಎಂದು ಖ್ಯಾತಿ ಗಳಿಸಿತ್ತು.
ಅವರಿಬ್ಬರನ್ನು ಮೊದಲು ಬ್ಯಾಟಿಂಗ್ಗೆ ಇಳಿಸುವ ನಿರ್ಧಾರವನ್ನು ಪಂದ್ಯ ಆರಂಭದ ಮೊದಲು ಮಾಡಲಾಗಿತ್ತು. ಆ ಸಮಯದಲ್ಲಿ ನಾನು ಕೂಡ ಹೊಸಬನಾಗಿದ್ದೆ ಮತ್ತು ನನ್ನದೇ ಪ್ರಪಂಚದಲ್ಲಿ ಇದ್ದೆ. ನಾನು ಮರಳಿ ತಂಡಕ್ಕೆ ಬಂದಿದ್ದೆ ಮತ್ತು ಚೆನ್ನಾಗಿ ಪ್ರದರ್ಶನ ನೀಡಬೇಕಾಗಿತ್ತು. ಆದರೆ ಧೋನಿ ಈ ನಿರ್ಧಾರವನ್ನು ತೆಗೆದುಕೊಂಡರು ಮತ್ತು ರೋಹಿತ್ ಜತೆ ಇನಿಂಗ್ಸ್ ಓಪನ್ ಮಾಡಲು ಹೇಳಿದರು. ಆದ್ದರಿಂದ ನಾನು ಅದನ್ನು ಹೆಚ್ಚು ಯೋಚಿಸಲಿಲ್ಲ. ನಾವು ಮೊದಲ ಪಂದ್ಯದಲ್ಲೇ 100 ರನ್‌ಗಳ ಜತೆಯಾಟ ಆಡಿದೆವು. ಪಿಚ್ ವೇಗವಾಗಿದ್ದರಿಂದ ಮೊದಲ 10 ಓವರ್‌ಗಳವರೆಗೆ ಕೇವಲ 30-35 ರನ್‌ಗಳಷ್ಟೇ ಮಾಡಿದ್ದೆವು. ಹೀಗಾಗಿ 10 ವರ್ಷಗಳ ಕಾಲ ಒಟ್ಟಿಗೆ ಆಡಬಹುದು ಎಂದು ನಾನುಕಂಡೂಕೊಂಡಿರಲಿಲ್ಲ ಎಂದು ಧವನ್ ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾದ ‘ದಿ ಶಿಖರ್ ಧವನ್ ಎಕ್ಸ್ಪೀರಿಯನ್ಸ್’ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ.
ರೋಹಿತ್ ಜೊತೆಗಿನ ಸ್ನೇಹ
ರೋಹಿತ್ ಜೊತೆಗಿನ ಸ್ನೇಹದ ಕುರಿತು ಮಾತನಾಡಿದ ಧವನ್, ನಮ್ಮಿಬ್ಬರ ನಡುವೆ ಉತ್ತಮ ತಾಳ್ಮೆ ಇತ್ತು ಮತ್ತು ಪರಸ್ಪರ ಆಟವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಇತ್ತು ಎಂದು ಹೇಳಿದರು.
ನಮಗೆ ಪರಸ್ಪರ ವಿಶ್ವಾಸವಿತ್ತು ಮತ್ತು ನಮ್ಮ ಸಂವಹನದ ಮಟ್ಟವೂ ಅತ್ಯಂತ ಉನ್ನತ ಮಟ್ಟದಲ್ಲಿತ್ತು. ಮೈದಾನದಲ್ಲಿ ಮತ್ತು ಮೈದಾನದಿಂದ ಹೊರಗೂ ನಮ್ಮ ಬಾಂಧವ್ಯ ಚೆನ್ನಾಗಿತ್ತು. ನಾವು ಒಟ್ಟಿಗೆ ಆಡಿದ್ದೇವೆ, ಅನೇಕ ಸರಣಿಗಳನ್ನು ಗೆದ್ದ ನಂತರ ಪಾರ್ಟಿ ಕೂಡ ಮಾಡಿದ್ದೇವೆ. ಭಾರತ ತಂಡದ ಪರ ಆಡಲು ಮೊದಲೇ ಅಂದರೆ ರೋಹಿತ್ 16-17 ವರ್ಷದಾಗಿದ್ದಾಗ, ನಾನು ಅವರೊಂದಿಗೆ ಅಂಡರ್-19 ವಿಶ್ವಕಪ್ ಆಡಿದ್ದೆ. ಹಾಗಾಗಿ ನಾವು ಬಾಲ್ಯದಿಂದಲೂ ಸ್ನೇಹಿತರಾಗಿದ್ದೇವು ಎಂದು ಧವನ್ ಹೇಳಿದರು.
ನಾಯಕನ ಪಾತ್ರ
ರೋಹಿತ್ ಶರ್ಮಾ ನಾಯಕತ್ವದ ಕುರಿತು ಮಾತನಾಡಿದ ಧವನ್, ಕ್ಲಿಷ್ಟಕರ ಕ್ಷಣಗಳನ್ನು ನಿಭಾಯಿಸುವ ರೋಹಿತ್ ಶರ್ಮಾ ಸಾಮರ್ಥ್ಯವನ್ನು ಅವರು ಕೊಂಡಾಡಿದರು. ಆಟಗಾರರ ಸಾಮರ್ಥ್ಯವನ್ನು ಗುರುತಿಸುವ ಗುಣ ಮತ್ತು ತಂಡವನ್ನು ಒಗ್ಗೂಡಿಸುವ ಕೌಶಲ್ಯವನ್ನೂ ಶ್ಲಾಘಿಸಿದರು.
2013ರಿಂದ 2025ರವರೆಗೆ 12 ವರ್ಷಗಳ ಅನುಭವ ಅವರಿಗೆ ಸಾಕಾಗಿದೆ. ರೋಹಿತ್ ಹಲವು ಹಂತಗಳನ್ನು ಎದುರಿಸಿದ್ದಾರೆ. ಅವರು ಒತ್ತಡದ ಪರಿಸ್ಥಿತಿಯಲ್ಲೂ ಹೇಗೆ ನಿರ್ವಹಿಸಬೇಕು ಎಂಬುದನ್ನು ಬಲ್ಲವರು. ಅವರು ಆಟಗಾರರನ್ನು ಹೇಗೆ ಒಗ್ಗೂಡಿಸಬೇಕು ಎಂಬುದು ತಿಳಿದಿದೆ. ನಾಯಕನಾಗಿ ಅವರು ಪರಿಪಕ್ವರಾಗಿರಬೇಕು, ಎಲ್ಲಿ ಸಡಿಲವಾಗಬೇಕು ಎಂಬುದು ಅವರಿಗೆ ಗೊತ್ತಿದೆ. ಇದು ಒಳ್ಳೆಯ ಸಮತೋಲನ ಮತ್ತು ರೋಹಿತ್‌ಗಿಂತ ಚೆನ್ನಾಗಿ ತಂಡದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವವರು ಕಡಿಮೆ ಎಂದು ಧವನ್ ಅಭಿಪ್ರಾಯಪಟ್ಟರು.