ನವ ದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಮಾರ್ಗದರ್ಶಕರಾಗಿ (ಮೆಂಟರ್) ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರನ್ನು 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ನೇಮಕ ಮಾಡಿರುವುದಾಗಿ ಘೋಷಿಸಿದೆ. ಫ್ರಾಂಚೈಸಿಯು ಫೆಬ್ರವರಿ 27, ಗುರುವಾರ ಸಾಮಾಜಿಕ ಸಾಮಾಜಿಕ ಮಾಧ್ಯಮದ ಮೂಲಕ ಈ ಮಾಹಿತಿಯನ್ನು ಫ್ರಾಂಚೈಸಿ ಪ್ರಕಟಿಸಿದೆ. ಈ ಮೂಲ ತಂಡದ ಪ್ರಭಾವಿ ಮಾಜಿ ಆಟಗಾರರ ಮರಳಿ ಅದ ತಂಡವನ್ನುಸೇರಿಕೊಂಡಿದ್ದಾರೆ.
ಕೆವಿನ್ ಪೀಟರ್ಸನ್ ತಂಡದ ಮುಖ್ಯ ಕೋಚ್ ಹೇಮಾಂಗ್ ಬದಾನಿ ಅವರೊಂದಿಗೆ ಕೆಲಸ ಮಾಡಲಿದ್ದಾರೆ. 2024ರ ಐಪಿಎಲ್ ನಂತರ ರಿಕಿ ಪಾಂಟಿಂಗ್ ಬೇರ್ಪಟ್ಟ ಬಳಿ ಡೆಲ್ಲಿ ಕ್ಯಾಪಿಟಲ್ಸ್ ಸಂಪೂರ್ಣ ಕೋಚಿಂಗ್ ಸಿಬ್ಬಂದಿಯ ಬದಲಾವಣೆ ಮಾಡಿದೆ. ಬದಾನಿ, ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರಿಂದ, ಹೊಸ ಆಟಗಾರರ ಆಯ್ಕೆ ಪ್ರಕ್ರಿಯೆಯೂ ಅವರ ಹೊಣೆಗಾರಿಕೆಯಾಗಿತ್ತು.
ನಾಯಕನನ್ನು ಘೋಷಿಸಿಲ್ಲ
ಡೆಲ್ಲಿ ತಂಡ ವೇಣುಗೋಪಾಲ್ ರಾವ್ ಅವರನ್ನು ಕ್ರಿಕೆಟ್ ನಿರ್ದೇಶಕರಾಗಿ ನೇಮಿಸಿದೆ ಮತ್ತು ಮುನಾಫ್ ಪಟೇಲ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಿದೆ. ಇದಲ್ಲದೆ, ಮ್ಯಾಥ್ಯೂ ಮಾಟ್ ಸಹಾಯಕ ಕೋಚ್ ಆಗಿ ಸೇರ್ಪಡೆಗೊಂಡಿದ್ದಾರೆ. ಮಾಟ್ ಹಿಂದೆ ಕೋಲ್ಕತಾ ನೈಟ್ ರೈಡರ್ಸ್ ತಂಡದೊಂದಿಗೆ ಕೆಲಸ ಮಾಡಿದ್ದರು ಮತ್ತು ಇತ್ತೀಚೆಗೆ ಇಂಗ್ಲೆಂಡ್ ತಂಡದ ವೈಟ್-ಬಾಲ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. 2022ರ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡಕ್ಕೆ ಅವರು ಮಾರ್ಗದರ್ಶನ ಮಾಡಿದ್ದರು. ಆದರೆ, ಈ ತಂಡ ಇನ್ನೂ ತಮ್ಮ ನಾಯಕನನ್ನು ಘೋಷಿಸಿಲ್ಲ.
ಪೀಟರ್ಸನ್ ಮಧುರ ನೆನಪುಗಳು
ಕೆವಿನ್ ಪೀಟರ್ಸನ್ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರಾದ ಜಿಎಂಆರ್ ಗ್ರೂಪ್ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. 2014ರಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿದ್ದರು. ಆದರೆ ಆ ಅವಧಿಯಲ್ಲಿ ತಂಡ ಕೇವಲ 2 ಗೆಲುವುಗಳೊಂದಿಗೆ ಕೊನೆಯ ಸ್ಥಾನ ಪಡೆದಿತ್ತು.
ಪೀಟರ್ಸನ್ ತಮ್ಮ ಹೊಸ ಹೊಣೆಗಾರಿಕೆ ಕುರಿತು ಮಾತನಾಡಿ, ಡೆಲ್ಲಿ ತಂಡದ ಪರ ಆಡಿದ ಅವಿಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡರು: “ನಾನು ಡೆಲ್ಲಿ ಫ್ರಾಂಚೈಸಿಯ ಪರ ಆಡಿದ ಅದ್ಭುತ ನೆನಪುಗಳನ್ನು ಹೊಂದಿದ್ದೇನೆ. ಹಲವು ವರ್ಷಗಳ ಬಳಿಕವೂ ನಾನು ಈ ತಂಡದ ಬಗ್ಗೆ ಅದೇ ಪ್ರೀತಿ ಉಳಿಸಿಕೊಂಡಿದ್ದೇನೆ. 2012ರಲ್ಲಿ ವೇಣು (ವೇಣುಗೋಪಾಲ್ ರಾವ್) ಅವರ ಜೊತೆ ಆಡಿದ್ದೇನೆ. ಈಗ ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ದೊರಕಿರುವುದು ಸಂತೋಷಕರ.” ಎಂದು ಪೀಟರ್ಸನ್ ಹೇಳಿದ್ದಾರೆ.
“ಮಾಲೀಕರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳ ಜತೆ ನನಗೆ ಉತ್ತಮ ಸಂಬಂಧವಿದೆ. ಈ ಆಲೋಚನೆ ಬಂದ ಕೂಡಲೇ ನಾನು ತಕ್ಷಣ ಒಪ್ಪಿಕೊಂಡೆ. ಡೆಲ್ಲಿ ಕ್ಯಾಪಿಟಲ್ಸ್‌ಗೆ ಮೆಂಟರ್ ಆಗುವುದು ನನಗೆ ಅಪೂರ್ವ ಅವಕಾಶ. ಟ್ರೋಫಿ ಗೆಲ್ಲಲು ನಾನು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ.” ಎಂದು ಅವರು ಹೇಳಿದ್ದಾರೆ.
2009 ಮತ್ತು 2010ರಲ್ಲಿ ಪೀಟರ್ಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. 2012 ಮತ್ತು 2014ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿದ್ದರು. 2012ರ ಐಪಿಎಲ್‌ನಲ್ಲಿ 305 ರನ್ ಗಳಿಸಿದ್ದರು. ಅದರಲ್ಲಿ ಒಂದು ಶತಕವೂ ಸೇರಿತ್ತು, ಇದು ಅವರ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನವಾಗಿತ್ತು. ಪೀಟರ್ಸನ್ 2016ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡದ ಪರ ಆಡಿದ ಬಳಿಕ ಐಪಿಎಲ್ನಿಂದ ವಿಮುಖರಾಗಿದ್ದರು.