ಬೆಂಗಳೂರು: ದೇಶದ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾದ ಭಾರತೀಯ ಸಂಚಾರ ನಿಗಮ ಲಿಮಿಟೆಡ್(ಬಿಎಸ್ಎನ್ಎಲ್)ನಲ್ಲಿ ಮೂರು ಕಾನೂನು ಸಲಹೆಗಾರರ ಹುದ್ದೆಗಳು (BSNL Recruitment 2025) ಖಾಲಿ ಇವೆ. ಎಲ್ಎಲ್ ಬಿಯಲ್ಲಿ ಪದವಿ ಪಡೆದವರು ಆನ್ ಲೈನ್ ಮೂಲಕ ಮೂರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತೆ ಬಿಎಸ್ಎನ್ಎಲ್ ಪ್ರಕಟಣೆ ತಿಳಿಸಿದೆ. ಆಸಕ್ತಿ ಇದ್ದವರು ಇಂದಿನಿಂದಲೇ ಅರ್ಜಿ ಸಲ್ಲಿಸಬಹುದಾಗಿದೆ.
ಫೆಬ್ರವರಿ 18ರಿಂದಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಕಾನೂನು ಪದವೀಧರರು www.bsnl.co.in. ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮಾಸಿಕ 75 ಸಾವಿರ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ. ವರ್ಷಕ್ಕೆ ಶೇ.5ರಷ್ಟು ಸಂಬಳ ಹೆಚ್ಚಳ ಮಾಡಲಾಗುತ್ತದೆ ಎಂದು ಬಿಎಸ್ಎನ್ಎಲ್ ಮಾಹಿತಿ ನೀಡಿದೆ.
ಅರ್ಹತೆಗಳು ಏನೇನು?
ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮಾನ್ಯತೆ ಪಡೆದ ಯಾವುದೇ ವಿವಿ ಅಥವಾ ಕಾಲೇಜಿನಲ್ಲಿ ಎಲ್ಎಲ್ ಬಿ ಅಧ್ಯಯನ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಗರಿಷ್ಠ 32 ವರ್ಷ ಮಿತಿಯನ್ನು ನಿಗದಿಪಡಿಸಲಾಗಿದೆ. ಕಾನೂನು ಪದವಿಯಲ್ಲಿ ಶೇ.60ರಷ್ಟು ಅಂಕಗಳನ್ನು ಪಡೆದಿರಬೇಕು. ಮೂರು ವರ್ಷ ಅನುಭವ ಇದ್ದವರಿಗೆ ಮೊದಲ ಆದ್ಯತೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಅರ್ಜಿ ಸಲ್ಲಿಕೆಗೆ ಪ್ರತಿಯೊಬ್ಬರೂ 500 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿದ ಬಳಿಕ ಸ್ಕ್ರೀನಿಂಗ್ ಕಮಿಟಿಯು ಶಾರ್ಟ್ ಲಿಸ್ಟ್ ಬಿಡುಗಡೆ ಮಾಡುತ್ತದೆ. ಇದಾದ ಬಳಿಕ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ಸಂದರ್ಶನ ಮಾಡಲಾಗುತ್ತದೆ. ಸಂದರ್ಶನದಲ್ಲಿ ಅಭ್ಯರ್ಥಿಗಳ ದಕ್ಷತೆಯನ್ನು ಅಳೆದು, ಅಗ್ರ ಮೂವರು ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಬಿಎಸ್ಎನ್ಎಲ್ ವೆಬ್ ಪೋರ್ಟಲ್ ಗೆ ಭೇಟಿ ನೀಡಬಹುದಾಗಿದೆ.