ಕೊಪ್ಪಳ: ಪ್ರೀತಿಗೆ ಮನೆಯವರು ಅಡ್ಡಿಯಾಗಿದ್ದಾರೆಂದು ಜೋಡಿಯೊಂದು ರಕ್ಷಣೆ ಕೋರಿ ಪೊಲೀಸರಿಗೆ ಮನವಿ ಮಾಡಿದೆ.
ಈ ಕುರಿತು ಜೋಡಿಯೊಂದು ಕೊಪ್ಫಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾರೆ. ಕನಕಗಿರಿ ತಾಲೂಕಿನ ಕಲಕೇರಿಯ ಪವಿತ್ರಾ ಹಾಗೂ ಶಿವಕುಮಾರ ನಾಲ್ಕು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಈ ಮದುವೆಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಯಾರಿಗೂ ಗೊತ್ತಾಗದಂತೆ ಪ್ರೇಮಿಗಳು ಕಳೆದ 10 ದಿನಗಳ ಹಿಂದೆ ಅಡವಿ ಅಮರೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದರು.
ಶಿವಕುಮಾರ್ ಹಾಗೂ ಪವಿತ್ರಾ ಒಂದೇ ಕೋಮಿಗೆ ಸೇರಿದ್ದವರು. ಆಸ್ತಿ ಹಾಗೂ ವಿದ್ಯಾರ್ಹತೆ ಕಡಿಮೆ ಎನ್ನುವ ಕಾರಣಕ್ಕೆ ಪವಿತ್ರಾ ಮನೆಯವರಿಂದ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಕನಕಗಿರಿ ಪೊಲೀಸರು ಸಹ ಪವಿತ್ರಾ ಕುಟುಂಬದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಶಿವಕುಮಾರ್ ನನ್ನು ಬಿಟ್ಟು ಬದುಕುವುದಿಲ್ಲ. ನನ್ನನ್ನು ನನ್ನ ಪಾಡಿಗೆ ಎಂದು ಕುಟುಂಬಸ್ಥರಲ್ಲಿ ಮನವಿ ಮಾಡಿದರೂ ಸುಮ್ಮನಾಗುತ್ತಿಲ್ಲ. ಹೀಗಾಗಿ ರಕ್ಷಣೆ ನೀಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.