ರಾವಲ್ಪಿಂಡಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಹಲವಾರು ದಾಖಲೆಗಳು ಸೃಷ್ಟಿಯಾಗುತ್ತಿವೆ. ಅಂತೆಯೇ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಏಕದಿನ ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಅವರು ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ 50 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಅತ್ಯಂತ ವೇಗವಾಗಿ 50 ಒಡಿಐ ವಿಕೆಟ್‌ಗಳನ್ನು ಕಬಳಿಸಿದ ಇಂಗ್ಲೆಂಡ್‌ನ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ಅಫ್ಘಾನಿಸ್ತಾನ ತಂಡದ ರೆಹಮಾನುಲ್ಲಾ ಗುರ್ಬಝ್ ಅವರನ್ನು ಔಟ್ ಮಾಡುವ ಮೂಲಕ ಜೋಫ್ರಾ ಆರ್ಚರ್ ತಮ್ಮ 50ನೇ ವಿಕೆಟ್ ತಮ್ಮ ಖಾತೆಗೆ ಹಾಕಿಕೊಂಡರು. .
ಅಫ್ಘಾನಿಸ್ತಾನ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಜೋಫ್ರಾ ಆರ್ಚರ್ ಹೊಸ ಚೆಂಡಿನಲ್ಲಿ ಕಾಟ ಕೊಟ್ಟರು. ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 50 ವಿಕೆಟ್ ಕಬಳಿಸಿದ ಬೌಲರ್ ಎಂಬ ದಾಖಲೆ ಶ್ರೀಲಂಕಾ ತಂಡದ ಮಾಜಿ ಸ್ಪಿನ್ನರ್ ಅಂಜತಾ ಮೆಂಡಿಸ್ ಹೆಸರಿನಲ್ಲಿದೆ. ಇವರು 19 ಪಂದ್ಯಗಳಿಂದ ಈ ದಾಖಲೆ ಬರೆದಿದ್ದರು. ನೇಪಾಳ ತಂಡದ ಸಂದೀಪ್ ಲಾಮಿಚನ್ನೆ 22 ಪಂದ್ಯಗಳಿಂದ ಈ ದಾಖಲೆ ಬರೆದಿ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಮಾಜಿ ವೇಗಿ ಅಜಿತ್ ಅಗರ್ಕರ್, ನ್ಯೂಜಿಲೆಂಡ್ ಮಾಜಿ ವೇಗಿ ಮಿಚೆಲ್ ಮೆಕ್‌ಕ್ಲೆನಾಘನ್ ಅವರು 50 ವಿಕೆಟ್‌ಗಳನ್ನು ಪಡೆಯಲು23 ಪಂದ್ಯಗಳನ್ನು ತೆಗೆದುಕೊಂಡಿದ್ದರು.
ವೇಗವಾಗಿ 50 ವಿಕೆಟ್ ಕಬಳಿಸಿದ ಇಂಗ್ಲೆಂಡ್‌ನ ಬೌಲರ್‌ಗಳು
ಜೋಫ್ರಾ ಆರ್ಚರ್ – 30 ಪಂದ್ಯಗಳು
ಜೇಮ್ಸ್ ಆಂಡರ್ಸನ್ – 31 ಪಂದ್ಯಗಳು
ಸ್ಟೀವ್ ಹಾರ್ಮಿಸನ್ – 32 ಪಂದ್ಯಗಳು
ಸ್ಟೀವನ್ ಫಿನ್ – 33 ಪಂದ್ಯಗಳು
ಡ್ಯಾರೆನ್ ಗಾಫ್ – 34 ಪಂದ್ಯಗಳು
ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 50 ವಿಕೆಟ್ ಕಬಳಿಸಿದ ಬೌಲರ್‌ಗಳು
ಅಜಂತಾ ಮೆಂಡಿಸ್ – 19 ಪಂದ್ಯಗಳು
ಸಂದೀಪ್ ಲಾಮಿಚನ್ನೆ – 22 ಪಂದ್ಯಗಳು
ಅಜಿತ್ ಅಗರ್ಕರ್ – 23 ಪಂದ್ಯಗಳು
ಮಿಚೆಲ್ ಮೆಕ್‌ಕ್ಲೆನಾಘನ್ – 23 ಪಂದ್ಯಗಳು
ಡೆನಿಸ್ ಲಿಲ್ಲಿ – 24 ಪಂದ್ಯಗಳು