ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಆಹಾರ ಉತ್ಪಾದನಾ ಕಂಪನಿಯೊಂದಕ್ಕೆ 7.5 ಲಕ್ಷ ರೂಪಾಯಿ ಮೋಸ ಮಾಡಿದ್ದ ಆರೋಪಿಯನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಸತ್ಯನಾರಾಯಣ ಎನ್ ಬಂಧಿತ ಆರೋಪಿ.
ನ್ಯೂಟ್ರಿ ಫೀಡ್ಸ್ ಆ್ಯಂಡ್ ಫಾರ್ಮ್ಸ್ ಪ್ರೈ ಲಿ. ಕಂಪನಿಯಿಂದ ಕೋಳಿ ಮಾಂಸ ಖರೀದಿಸಿ ಅಂಗಡಿಗಳಿಗೆ ಸರಬರಾಜು ಮಾಡುವುದಾಗಿ ಹೇಳಿದ್ದ ಆರೋಪಿ ಸತ್ಯನಾರಾಯಣ, ಲೋಡ್ ತೆಗೆದುಕೊಂಡು ಹೋಗುವ ನೀಡಿದ್ದ ಚೆಕ್ ಖಾತೆಯಲ್ಲಿ ಹಣ ಇರದ ಕಾರಣ ಬೌನ್ಸ್ ಆಗಿತ್ತು. ಹಣ ಪಾವತಿಸುವಂತೆ ಕಂಪನಿ ಸೂಚನೆ ನೀಡಿದರೂ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಕಂಪನಿ ಪ್ರತಿನಿಧಿಗಳು ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಿಕೊಂಡ ಯಲಹಂಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಗರದ ಹೆಚ್ಚುವರಿ ಮ್ಯಾಜಿಸ್ಟ್ರೇಜ್ ನ್ಯಾಯಾಲಯ ಆರೋಪಿ ಸತ್ಯನಾರಾಯಣನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.