ಬೆಂಗಳೂರು : ಟಾಟಾ ಮೋಟಾರ್ಸ್ ಇಂಡಿಯಾ ಈಗ ಸಫಾರಿ ಕಾರಿನ 27ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಸಾಂದರ್ಭಿಕದ ಅಂಗವಾಗಿ ಟಾಟಾ ಸ್ಟೆಲ್ತ್ ಎಡಿಷನ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ವಿಶೇಷ ಆವೃತ್ತಿ ಕೇವಲ 2,700 ಘಟಕಗಳಿಗೆ ಮಾತ್ರ ಸೀಮಿತವಾಗಿದ್ದು, ಇದು ಸಫಾರಿ ಮತ್ತು ಟಾಟಾ ಹ್ಯಾರಿಯರ್‌ನಲ್ಲಿ ಮಾತ್ರ ಲಭ್ಯವಿದೆ.
ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮುಖ್ಯ ವಾಣಿಜ್ಯ ಅಧಿಕಾರಿ, ಮಿಸ್ಟರ್ ವಿವೇಕ್ ಶ್ರೀವತ್ಸ, ಮಾತನಾಡಿ, “ಭಾರತದಲ್ಲಿ ಎಸ್‌ಯುವಿ ವಿಭಾಗದಲ್ಲಿ ಟಾಟಾ ಮೋಟಾರ್ಸ್ ಸಾಕಷ್ಟು ವರ್ಷಗಳಿಂದ ಅಗ್ರ ಸ್ಥಾನ ಪಡೆದಿದೆ. ಎಸ್ಯುವಿ ಆವಿಷ್ಕಾರ ನಮ್ಮ ಡಿಎನ್‌ಎಯಲ್ಲಿ ಆಳವಾಗಿ ನೆಲೆಸಿದೆ. ಭಾರತೀಯ ಮಾರುಕಟ್ಟೆಗೆ ಲೈಫ್ಸ್ಟೈಲ್ ಎಸ್‌ಯುವಿಯ ಆಲೋಚನೆಯನ್ನು ಪರಿಚಯಿಸಿದ ಟಾಟಾ ಸಫಾರಿ, ಹಲವಾರು ಅನುಕೂಲಗಳನ್ನು ಪ್ರತಿಬಿಂಬಿಸುತ್ತದೆ. 27 ವರ್ಷಗಳ ಅತ್ಯುತ್ತಮ ಪರಂಪರೆಯೊಂದಿಗೆ, ಟಾಟಾ ಸಫಾರಿ ನಿರಂತರವಾಗಿ ಬೆಳೆದಿದ್ದು, ಸ್ಟೆಲ್ತ್ ಎಡಿಷನ್ ಬಿಡುಗಡೆ ಅದಕ್ಕೆ ಸಾಕ್ಷಿ ಎಂದು ಹೇಳಿದರು.
“ಈ ವಿಶೇಷ ಆವೃತ್ತಿ ಪ್ರೀಮಿಯಂ ಮತ್ತು ವಿಶಿಷ್ಟವಾಗಿದ್ದು ಕೇವಲ 2,700 ಘಟಕಗಳ ಆಕರ್ಷಕ ಸ್ಟೆಲ್ತ್ ಮ್ಯಾಟ್ ಬ್ಲ್ಯಾಕ್ ಫಿನಿಷ್ ಲಭ್ಯವಿದೆ. ಸ್ಟೆಲ್ತ್ ಎಡಿಷನ್ ನಿಖರವಾಗಿ ಒಂದು ಎಸ್‌ಯುವಿ ಮಾತ್ರವಲ್ಲ, ಇದು ಗೌರವ, ಸಾಹಸ ಮತ್ತು ಸಾಮರ್ಥ್ಯದ ಚಿಹ್ನೆ. ಇದು ಕಲೆಕ್ಟರ್ಸ್ ಕಾರ್ ಆಗಿದೆ. ಎಂದು ಹೇಳಿದರು.

ಎಂಜಿನ್ ಮತ್ತು ಪವರ್‌ಟ್ರೇನ್
ಸಫಾರಿ ಮತ್ತು ಹ್ಯಾರಿಯರ್ ಸ್ಟೆಲ್ತ್ ಎಡಿಷನ್‌ನಲ್ಲಿ ಯಾವುದೇ ತಾಂತ್ರಿಕ ಬದಲಾವಣೆಗಳಿಲ್ಲ. ಈಗಿರುವ ಪವರ್‌ಟ್ರೇನ್ ಅನ್ನು ಬಳಸಲಾಗಿದೆ – 2.0 ಲೀಟರ್ ಡೀಸೆಲ್ ಎಂಜಿನ್, ಇದು 165.70 ಎಚ್ಪಿ ಪವರ್ ಮತ್ತು 350 ಎನ್ಎಮ್ ಟಾರ್ಕ್ ಉತ್ಪಾದಿಸಬಲ್ಲದು.
ಫೀಚರ್ಗಳು
ಟಾಟಾ ಸಫಾರಿ ಮತ್ತು ಟಾಟಾ ಹ್ಯಾರಿಯರ್ ಸ್ಟೆಲ್ತ್ ಎಡಿಷನ್‌ಗಳು ಕಾರಿನ ಸ್ಟ್ಯಾಂಡರ್ಡ್ ಆವೃತ್ತಿಗಳಂತಹದೇ ವೈಶಿಷ್ಟ್ಯಗಳನ್ನು ಹೊಂದಿವೆ. ಆದರೆ, ಇಂಟೀರಿಯರ್ನಲ್ಲಿ ಪೂರ್ತಿ ಕಪ್ಪು ಲೆದರ್‌ರೇಟ್ಸ್ ಸೀಟ್ಗಳನ್ನು ನೀಡಲಾಗಿದೆ
ಟಾಟಾ ಸಫಾರಿ ಸ್ಟೆಲ್ತ್ ಎಡಿಷನ್‌ನ ಪ್ರಾರಂಭಿಕ ಬೆಲೆ 25.74 ಲಕ್ಷ ರೂ. (ಎಕ್ಸ್-ಶೋ ರೂಮ್). ಟಾಟಾ ಹ್ಯಾರಿಯರ್ ಸ್ಟೆಲ್ತ್ ಎಡಿಷನ್ 25.09 ಲಕ್ಷ ರೂ. (ಎಕ್ಸ್-ಶೋ ರೂಮ್) ಬೆಲೆಗೆ ಲಭ್ಯವಿದೆ.