ಬೆಳಗಾವಿ: ಕೇವಲ 7 ನಿಮಿಷಗಳಲ್ಲಿ ಎಟಿಎಂ ಕಳ್ಳತನ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಘಟನೆ ಜಿಲ್ಲೆಯ ಸಾಂಬ್ರಾ ಎಂಬ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿನ ಮುಖ್ಯ ರಸ್ತೆಯಲ್ಲಿರುವ ಎಸ್ ಬಿಐ ಎಟಿಎಂನ್ನು ದುಷ್ಕರ್ಮಿಗಳು ದೋಚಿದ್ದಾರೆ. ಗ್ಯಾಸ್ ಕಟರ್ ಮಷಿನ್ ಬಳಕೆ ಮಾಡಿ ಎಟಿಎಂನಲ್ಲಿದ್ದ 75 ಸಾವಿರ ರೂ. ಕಳ್ಳತನ ಮಾಡಿದ್ದಾರೆ.
ಆನಂತರ ಅಲ್ಲಿದ್ದ ಸಿಸಿಟಿವಿಯನ್ನು ಖದೀಮರು ನಾಶ ಮಾಡಿದ್ದಾರೆ. ನಂತರ ಇದೇ ಖದೀಮರ ಗ್ಯಾಂಗ್ ಮಹಾರಾಷ್ಟ್ರ ಕೊಲ್ಹಾಪುರದ ಅಜರಾ ಗ್ರಾಮದಲ್ಲಿ ಮತ್ತೊಂದು ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದಾರೆ. ಅಷ್ಟರಲ್ಲಿ ಬೆಳಕಾಗಿದ್ದರಿಂದಾಗಿ ಕಳ್ಳತನ ಸಾಧ್ಯವಾಗದೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.