ದುಬೈ ; ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ಗಳ ಗೆಲುವು ದಾಖಲಿಸಿ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ಈ ಹಣಾಹಣಿ ವೀಕ್ಷಿಸಲು ದೇಶ ವಿದೇಶಗಳಿಂದ ಹಲವಾರು ಸೆಲೆಬ್ರಿಟಿಗಳು ಬಂದಿದ್ವರು. ಏತನ್ಮಧ್ಯೆ, ಪಂದ್ಯ ನಡೆಯುತ್ತಿದ್ದ ವೇಳೆ ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಗ್ಯಾಲರಿಯಲ್ಲಿ ಕುಳಿತಿದ್ದ ಯುವತಿಯೊಬ್ಬಳು ಫ್ಲೈಯಿಂಗ್ ಕಿಸ್ ಕೊಟ್ಟಳು. ಈ ದೃಶ್ಯ ವೈರಲ್ ಆದ ಬಳಿಕ ಆಕೆ ಯಾರೆಂಬ ಹುಡುಕಾಟ ಶುರುವಾಯಿತು.
ರೋಚಕ ಪಂದ್ಯದ ನಡುವೆ ಹೆಚ್ಚು ಸದ್ದು ಮಾಡಿದ್ದು ಹಾರ್ದಿಕ್ ಪಾಂಡ್ಯ ಅವರಿಗೆ ಬೆಂಬಲ ನೀಡಿದ ಅವರ ಹೊಸ ಗೆಳತಿ ಎನ್ನಲಾದ ನಟಿ ಹಾಗೂ ಬ್ರಿಟಿಷ್ ಗಾಯಕಿ ಜಾಸ್ಮಿನ್ ವಾಲಿಯಾ. ಜಾಸ್ಮಿನ್ ವಾಲಿಯಾ ಅವರೊಂದಿಗೆ ಆಲ್ರೌಂಡರ್ ಪಾಂಡ್ಯ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಹಲವು ದಿನಗಳ ವದಂತಿ. ಹೀಗಾಗಿ ಅವರು ಕಿಸ್ ಕೊಟ್ಟಿದ್ದು ಪಾಂಡ್ಯಗೆ ಎಂಬುದಾಗಿ ಹಲವರು ತಿಳಿದುಕೊಂಡಿದ್ದಾರೆ.
ಪಾಕಿಸ್ತಾನ ವಿರುದ್ಧ ಪಂದ್ಯದ ವೇಳೆ ಅವರು ಗ್ಯಾಲರಿಯಲ್ಲಿ ಕುಳಿತು ಆಟಗಾರರನ್ನು ಹುರಿದುಂಬಿಸುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದು ಭಾರತೀಯ ಕ್ರಿಕೆಟ್ ಆಟಗಾರನ ಜತೆಗಿನ ಆಕೆಯ ನಿಕಟ ಸಂಬಂಧದ ಬಗ್ಗೆ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.

ಹಾರ್ದಿಕ್ ಅಥವಾ ಜಾಸ್ಮಿನ್ ಇಬ್ಬರೂ ತಮ್ಮ ಸಂಬಂಧವನ್ನು ದೃಢಪಡಿಸದಿದ್ದರೂ, ಕೆಲವು ತಿಂಗಳಿಂದ ವದಂತಿಗಳು ಹರಡುತ್ತಿವೆ. ನತಾಶಾ ಸ್ಟಾಂಕೋವಿಕ್ ಜೊತೆಗೆ ವಿಚ್ಛೇದನ ಪಡೆದ ಬಳಿಕ ಇವರಿಬ್ಬರು ಜತೆಯಾಗಿದ್ದಾರೆ ಎನ್ನಲಾಗಿದೆ. ವಿಚ್ಛೇದನ ಪಡೆದ ಕೆಲವು ವಾರಗಳ ನಂತರ ಈ ಜೋಡಿ ಒಟ್ಟಿಗೆ ಗ್ರೀಸ್ಗೆ ಹೋಗಿತ್ತು. ಇದು ಅವರ ಡೇಟಿಂಗ್ ಕುರಿತ ವರದಿಗಳಿಗೆ ಸುಳಿವು ನೀಡಿತ್ತು. ಆದರೆ ಒಟ್ಟಿಗೆ ಇಬ್ಬರು ಕಾಣಿಸಿಕೊಂಡಿರಲಿಲ್ಲ.
ಹಾರ್ದಿಕ್ ಮತ್ತು ಜಾಸ್ಮಿನ್ ಅವರು ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಫಾಲೋ ಮಾಡುತ್ತಿದ್ದಾರೆ. ಹಾರ್ದಿಕ್ ಪೋಸ್ಟ್ಗಳನ್ನು ಜಾಸ್ಮಿನ್ ಲೈಕ್ ಮಾಡುತ್ತಿದ್ದಾರೆ. ಅವರಿಬ್ಬರೂ ವದಂತಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ ಅವರ ಆನ್‌ಲೈನ್ ಸಂಬಂಧ ಖಾತರಿಯಾಗಿದೆ.