ರಾಯಚೂರು: ಜಿಲ್ಲೆಯ ದೇವದುರ್ಗದಲ್ಲಿ ಜೆಡಿಎಸ್ ವರ್ಸಸ್ ಪೊಲೀಸ್ ಎಂಬ ವಾತಾವರಣ ನಿರ್ಮಾಣವಾಗಿದೆ.
ಶಾಸಕರ ಕರೆಗೂ ಟ್ರಾಫಿಕ್ ಪಿಎಸ್ ಐ ಗೌರವ ನೀಡುತ್ತಿಲ್ಲ ಎಂದು ಬೆಂಬಲಿಗರು ಠಾಣೆಯ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ಟ್ರಾಫಿಕ್ ಪೊಲೀಸ್ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ನಿನ್ನೆ ರಾತ್ರಿಯಿಂದ ಅಹೋರಾತ್ರಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದಾರೆ. ಪಿಎಸ್ ಐ ಹೆಲ್ಮೆಟ್ ಧರಿಸದಿರುವ ಸವಾರರಿಗೆ ದಂಡ ವಿಧಿಸುತ್ತಿದ್ದಾರೆ. ತ್ರಿಬಲ್ ರೈಡಿಂಗ್, ಅಕ್ರಮ ಮರಳು ಟ್ರಾಕ್ಟರ್, ಸೇರಿದಂತೆ ನಿಯಮ ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಿದ್ದಾರೆ. ಶಾಸಕರಿಂದ ಇನ್ ಫ್ಲೂಯೆನ್ಸ್ ಮಾಡಿಸಿದರೂ ಜಗ್ಗುತ್ತಿಲ್ಲ ಎನ್ನಲಾಗಿದೆ.
ಆದರೆ, ಜೆಡಿಎಸ್ ಪಿಎಸ್ಐ ಟಾರ್ಗೆಟ್ ಮಾಡಿ ರಾತ್ರಿಯಿಂದ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಪ್ರತಿಭಟನಾಕಾರರು, ಹಿರಿಯ ಪೊಲೀಸ್ ಅಧಿಕಾರಿಗಳ ಮನವೊಲಿಕೆಗೂ ಬಗ್ಗಿಲ್ಲ. ಹಲವು ಸಂಘಟನಕಾರರು, ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪಿಎಸ್ ಐ ಸಸ್ಪೆಂಡ್ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿಂದೆಯೂ ಜೆಡಿಎಸ್ ಶಾಸಕಿ ಠಾಣೆ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ದೇವದುರ್ಗ ಶಾಸಕಿ ಕರೆಮ್ಮ.ಜಿ.ನಾಯಕ್ ಪ್ರತಿಭಟನೆ ನಡೆಸಿದ್ದರು. ಈಗ ಮತ್ತೆ ಪೊಲೀಸರು ಜೆಡಿಎಸ್ ಮಧ್ಯೆ ಪ್ರತಿಭಟನೆ ನಡೆಯುತ್ತಿದೆ.