ಚಿಕ್ಕಬಳ್ಳಾಪುರ : ಕಾಂಗ್ರೆಸ್ ಸರ್ಕಾರ ಸತ್ತ ಸರ್ಕಾರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ಅಂತಾ ಹೇಳುತ್ತದೆ. ಆದರೆ, ಗ್ಯಾರಂಟಿನೇ ಜನರ ಕೈಗೆ ಸೇರುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕೆಲ ಇಲ್ಲದಂತಾಗಿದೆ. ಸದ್ಯ ಬೇಸಿಗೆ ಬರುತ್ತಿದೆ ಯಾರಿಗೂ ನೀರು ಸಿಗುತ್ತಿಲ್ಲ. ಆದರೆ, ಇದರ ಬಗ್ಗೆ ಸರ್ಕಾರ ಯಾವುದೇ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಆದರೆ, ಲೂಟಿ ಮಾಡುವುದು, ಆಸ್ತಿ ಮಾಡುವುದು ಅಷ್ಟೇ ಕಾಂಗ್ರೆಸ್ ಸರ್ಕಾರದ ಕೆಲಸವಾಗಿದೆ. ಬೆಂಗಳೂರು ಸುತ್ತ ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡುತ್ತಿದ್ದಾರೆ. ಈ ಸರ್ಕಾರದಿಂದ ಯಾರು ಉದ್ದಾರ ಆಗುವುದಿಲ್ಲ ಎಂದು ಆರೋಪಿಸಿದ್ದಾರೆ.