ದಾವಣಗೆರೆ: ಲೆಕ್ಕಪತ್ರದ ವಿಚಾರಕ್ಕಾಗಿ ಚರ್ಚ್ ಭಕ್ತರು ಕೈ ಕೈ ಮಿಲಾಯಿಸಿರುವ ಘಟನೆಯೊಂದು ನಡೆದಿದೆ.
ದಾವಣಗೆರೆ ಜಿಲ್ಲೆಯ ಹರಿಹರದ ಆರೋಗ್ಯ ಮಾತೆ ಚರ್ಚ್ ನಲ್ಲಿ ಈ ಘಟನೆ ನಡೆದಿದೆ. ಕೆಲವು ಭಕ್ತರು ಚರ್ಚ್ ನ ಲೆಕ್ಕಪತ್ರ ಕೇಳಿದ್ದರು ಎನ್ನಲಾಗಿದೆ. ಆದರೆ, ಚರ್ಚ್ ನ ಫಾದರ್ ಕೆ.ಎ. ಜಾರ್ಜ್ ಲೆಕ್ಕ ಕೊಡದೆ ಸತಾಯಿಸುತ್ತಿದ್ದರು ಎನ್ನಲಾಗಿದೆ.
ಹೀಗಾಗಿ ಹಣ, ಆಸ್ತಿಯ ಲೆಕ್ಕಪತ್ರ ಕೆಳಿದ್ದ ಚರ್ಚ್ ನ ಭಕ್ತರು ಹಾಗೂ ಫಾದರ್ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ. ಲೆಕ್ಕ ಕೊಡದ ಹಿನ್ನೆಲೆಯಲ್ಲಿ ಶಿವಮೊಗ್ಗದ ಕ್ರೈಸ್ತ ರೋಮನ್ ಕ್ಯಾಥೋಲಿಕ್ ಧರ್ಮಾಧ್ಯಕ್ಷ ಬಿಷಪ್ ಫ್ರಾನ್ಸಿಸ್ ಗೆ ಭಕ್ತರು ಘೇರಾವ್ ಹಾಕಿದ್ದಾರೆ. ಫಾದರ್ ಶನಿವಾರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹರಿಹರ ಚರ್ಚ್ ಗೆ ಆಗಮಿಸಿದ್ದರು. ಈ ವೇಳೆ ಬಿಷಪ್ ಫ್ರಾನ್ಸಿಸ್ ಫಾದರ್ ಗೆ ಘೇರಾವ್ ಹಾಕಿದ್ದರು. ಹಲವು ಬಾರಿ ಮನವಿ ಮಾಡಿದರೂ ಲೆಕ್ಕಪತ್ರ ಕೊಟ್ಟಿಲ್ಲ ಅಂತ ಬಿಷಪ್ ಫ್ರಾನ್ಸಿಸ್ ಗೆ ಘೇರಾವ್ ಹಾಕಿದ್ದಾರೆ. ಈ ವೇಳೆ ಮಾತಿಗೆ ಮಾತು ನಡೆದು ಅದು ವಿಕೋಪಕ್ಕೆ ತೆರಳಿದೆ. ಈ ವೇಳೆ ಎರಡು ಗುಂಪುಗಳು ಕೈ ಕೈ ಮಿಲಾಯಿಸಿವೆ. ಈ ಕುರಿತು ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.