ಚಿಕ್ಕಮಗಳೂರು: ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರುವ ಕಳಸೇಶ್ವರ ದೇವಸ್ಥಾನಕ್ಕೆ (Kalaseshwara Temple) ವಿದೇಶಿಗರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಧ್ಯಾನ ಮಾಡಿದ್ದಾರೆ.
ಸುಮಾರು 19 ವಿದೇಶಿ ಭಕ್ತರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಭಾರತೀಯ ಸಂಸ್ಕೃತಿಯ ಅನಾವರಣಗೊಳಿಸಿದ್ದಾರೆ. ಈ ಪ್ರವಾಸಿಗರು ರಷ್ಯಾ ರಾಷ್ಟ್ರದಿಂದ ಆಗಮಿಸಿದ್ದಾರೆ. ಈ ದೇವಸ್ಥಾನಕ್ಕೆ ಆಗಮಿಸಿ, ವಿಶೇಷ ಪೂಜೆ ಮಾಡಿದ್ದಲ್ಲದೆ, ಧ್ಯಾನ, ಜಪ-ತಪ ಸಲ್ಲಿಸಿದ್ದಾರೆ. ಆನಂತರ ಭಾರತೀಯ ಸಂಸ್ಕೃತಿಯಂತೆ ನೆಲದ ಮೇಲೆ ಕುಳಿತು ಪ್ರಸಾದ ಸ್ವೀಕರಿಸಿದ್ದಾರೆ.
ಸ್ಥಳೀಯರು ಇದನ್ನು ಕಂಡು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕಳಸೇಶ್ವರ ದೇವಸ್ಥಾನ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ಕಳಸ ರಸ್ತೆಯಲ್ಲಿದೆ. ರಮಣೀಯವಾದ ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿರುವ ಇದು ಕರ್ನಾಟಕದಲ್ಲಿನ ಜನಪ್ರಿಯ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಇಲ್ಲಿ ಭಕ್ತರು ಆಗಮಿಸುತ್ತಿರುತ್ತಾರೆ.