ಬೆಂಗಳೂರು: ಕಾಂಗ್ರೆಸ್ ನಾಯಕತ್ವ (Congress Leadership) ದ ಫೈಟ್ ಆಗಾಗ ಸುದ್ದಿಯಾಗುತ್ತಲೇ ಇದೆ. ಸಿಎಂ ಬೆಂಬಲಿಗರ ಬಣ ಹಾಗೂ ಡಿಕೆಶಿ ಮಧ್ಯೆ ಈ ಫೈಟ್ ಬಹಿರಂಗವಾಗುತ್ತಲೇ ಇದೆ. ಈಗ ಡಿಕೆಶಿ ಹೇಳಿರುವ ಮಾತು ಮತ್ತಷ್ಟು ಕಿಚ್ಚು ಹಚ್ಚಿದೆ.
ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆಶಿ ಮಾತನಾಡಿ, ಹಳೆ ಪಿಂಚಣಿ ಯೋಜನೆ (OPS) ಜಾರಿಗೆ ತರುತ್ತೇವೆ ಎಂದು ಡಿಕೆಶಿ ಹೇಳುತ್ತಿದ್ದಂತೆ ನೌಕರಸ್ಥರು ಘೋಷಣೆ ಕೂಗಲು ಆರಂಭಿಸಿದರು. ಈ ವೇಳೆ ಡಿಕೆಶಿ ಹೆಸರು ಹೇಳಿ ಕೂಗಲಾರಂಭಿಸಿದರು. ಈ ವೇಳೆ ಡಿಕೆಶಿ ನಾಯಕತ್ವದ ಬಗ್ಗೆ ಮಾತನಾಡಿದರು.
“ನೋಡ್ರಪ್ಪ ಮುಂದೆ ನಾನು ಚುನಾವಣೆಗೆ ನಿಂತಾಗ ನನ್ನ ಲೀಡರ್ಶಿಪ್ನಲ್ಲಿಯೇ ನಡೆದಾಗ ಈ ಪದ ಹೇಳಿ. ನಾನು ಇನ್ನೂ ಎಂಟತ್ತು ವರ್ಷ ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ. ನನ್ನ ಆರೋಗ್ಯ ಗಟ್ಟಿಯಾಗಿದೆ ಎಂದು ಹೇಳುವ ಮೂಲಕ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ಕೆಳಗೆ ಇಳಿಸಲು ಹಲವರು ಪ್ರಯತ್ನಿಸುತ್ತಿದ್ದಾರೆ. ದಲಿತ ಸಚಿವರು ಒಂದೊಂದೆ ಹೇಳಿಕೆ ನೀಡುತ್ತಿದ್ದಾರೆ. ಇನ್ನೊಂದು ಕಡೆ ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಈ ಸಮಯಲ್ಲೇ ತಮ್ಮ ನಾಯಕತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ ಎನ್ನುವ ಮೂಲಕ ಡಿಕೆಶಿ ಸಿಎಂ ಆಪ್ತರಿಗೆ ಮತ್ತೊಂದು ಸಂದೇಶ ನೀಡಿದರಾ ಎಂಬ ಪ್ರಶ್ನೆ ಈಗ ಚರ್ಚೆಯಾಗುತ್ತಿದೆ.