ಬೆಂಗಳೂರು: ಗೃಹಲಕ್ಷ್ಮೀ ಅನ್ನಭಾಗ್ಯ ಅಕ್ಕಿ ಯೋಜನೆಗೆ ಅನುದಾನ ಕೊರತೆಯಾಗಿದೆಯೇ? ಎಂಬ ಅನುಮಾನವೊಂದು ಈಗ ವ್ಯಕ್ತವಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ಈ ರೀತಿಯ ಸಂಶಯವೊಂದನ್ನು ಹುಟ್ಟು ಹಾಕಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಡಿಸಿಎಂ ಅವರ ಮಾತು ಸಿಎಂ ಅವರ ಹಣಕಾಸು ವ್ಯವಸ್ಥೆಯನ್ನೇ ಕೆಣಕುವಂತಿದ್ದು, ಈ ಹೇಳಿಕೆ ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಡುತ್ತಿದೆ. ನಮಗೂ ಹಣ ಹಾಕೋಕೆ ಕಲೆಕ್ಷನ್ ಆಗಬೇಕಲ್ಲವಾ? ಗ್ಯಾರಂಟಿ ಯೋಜನೆಗೆ ಹಣ ಕೊಡೋಕೆ ಅನುದಾನ ಕೊರತೆಯಾಗಿದೆ ಎಂದು ಹೇಳಿದ್ದಾರೆ.
ನಾನೂ ಪಕ್ಷದ ಅಧ್ಯಕ್ಷನಾಗಿ ಗ್ಯಾರಂಟಿ ಘೋಷಣೆ ಮಾಡಿದ್ದೆ. ನಿಮಗೆ ಒಳ್ಳೆಯದಾಗಲಿ ಎಂಬ ನಿಟ್ಟಿನಲ್ಲಿ ಘೋಷಣೆ ಮಾಡಲಾಗಿತ್ತು. 4 ಕೋಟಿ ಜನರಿಗೆ ಸಹಾಯ ಮಾಡುವ ಗ್ಯಾರಂಟಿ ಕೊಟ್ಟಿದ್ದೇವೆ. ಆದರೆ, ಏನು ಮಾಡೋದು ಬೆಲೆ ಏರಿಕೆಯಾಗಿದೆ. ಆದಾಯ ಪಾತಾಳ ಸೇರಿದೆ. ಅದಕ್ಕೆ ನಾವೂ 2 ಸಾವಿರ ರೂಪಾಯಿ ಘೋಷಣೆ ಮಾಡಿದೇವಿ. ನಾವೇನು ತಿಂಗಳು ತಿಂಗಳು ಕೊಡ್ತೇವಿ ಅಂತಾ ಹೇಳಿದ್ದೇವಾ? ನಾವ್ ಕೊಡ್ತೇವಿ, ಕಲೆಕ್ಷನ್ ಮಾಡಬೇಕಲ್ಲ. ನೀವೂ ಅಕೌಂಟ್ ಗೆ ಹಾಕಬೇಕಲ್ಲ. ಯಾರೋ ಹೇಳ್ತಾ ಇದ್ರು, ಒಂದು ಬಿಡಿಗಾಸು ಬಿಡಲ್ಲ ಅಂತಾ ಇದ್ರು. ಕೆಲವರು ಅತ್ತೆ-ಸೊಸೆಗೆ ಜಗಳ ತಂದಿಟ್ಟರು ಅಂದ್ರು. ನಾವ್ ಜಗಳ ಹಚ್ಚಿದೇವಾ?ಎಂದು ಪ್ರಶ್ನಿಸಿದ್ದಾರೆ. ಡಿಕೆಶಿ ಸಿಎಂ ಆರ್ಥಿಕ ಚಾಣಾಕ್ಷತನವನ್ನು ಈ ಮೂಲಕ ಪ್ರಶ್ನಿಸಿದರಾ ಎಂಬ ಸಂಶಯ ಹುಟ್ಟು ಹಾಕಿದೆ. ಡಿಸಿಎಂ ಡಿಕೆಶಿ ಮಾತಿನ ಹಿಂದಿದ್ಯಾ ಸಿಎಂ ಹಣಕಾಸು ಖಾತೆಗೆ ಕ್ಯಾತೆ? ಎಂಬ ಚರ್ಚೆಗಳು ಈಗ ಶುರುವಾಗಿವೆ.