ಬೆಂಗಳೂರು: ಇತ್ತೀಚೆಗಷ್ಟೇ ಬಿಎಂಆರ್ ಸಿಎಲ್ ಮೆಟ್ರೋ ದರ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಳಿತ ಕಾಣುತ್ತಿದೆ.
ಮೆಟ್ರೋ ದರ ಏರಿಕೆಯ ವಿರೋಧದ ಮಧ್ಯೆಯೂ ನಮ್ಮ ಮೆಟ್ರೋ ಏರಿಕೆ ಮಾಡಲಾಗಿದೆ. ದರ ಏರಿಕೆಯ ನಂತರ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದೆ. ಈ ಕುರಿತು ನಮ್ಮ ಮೆಟ್ರೋ ಸಂಗ್ರಹಕ್ಕೆ ನಮ್ಮ ಮೆಟ್ರೋ ಅಧಿಕಾರಿಗಳು ಮುಂದಾಗಿದ್ದಾರೆ.
ಪ್ರಯಾಣಿಕರ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈಡರ್ ಶಿಪ್ ಇಳಿಕೆಯ ರಿಪೋರ್ಟ್ ಸಿದ್ದಪಡಿಸಲು ಬಿಎಂಆರ್ ಸಿಎಲ್ ಮುಂದಾಗಿದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸ್ಟೇಷನ್ ಬೈ ಸ್ಟೇಷನ್ ಮಾಹಿತಿ ಸಂಗ್ರಹಕ್ಕೆ ಬಿಎಂಆರ್ ಸಿಎಲ್ ಮುಂದಾಗಿದೆ.
ಸಂಪೂರ್ಣ ರಿಪೋರ್ಟ್ ತಯಾರಿ ಮಾಡಿ ಬೋರ್ಡ್ ಮುಂದೆ ಮತ್ತೊಂದು ರಿಪೋರ್ಟ್ ಸಲ್ಲಿಕೆಗೆ ನಮ್ಮ ಮೆಟ್ರೋ ಅಧಿಕಾರಿಗಳು ಮುಂದಾಗಿದ್ದಾರೆ. ದರ ಏರಿಕೆಯ ಬೆನ್ನಲ್ಲೇ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಈಗ ಅಧಿಕಾರಿಗಳು ದರ ಇಳಿಕೆ ಮಾಡುತ್ತಾರಾ? ಕಾಯ್ದು ನೋಡಬೇಕಿದೆ.