ನಜ್ಮುಲ್ ಹೋಸೈನ್ ಶಾಂತೋ ನೇತೃತ್ವದ ಬಾಂಗ್ಲಾದೇಶ ಕ್ರಿಕೆಟ್ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ತನ್ನ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಸೋಲು ಅನುಭವಿಸಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ ಕ್ರಿಕೆಟ್ ತಂಡವು 21 ಎಸೆತ ಬಾಕಿ ಇರುವಾಗಲೇ 6 ವಿಕೆಟ್ಗಳಿಂದ ಜಯ ಸಾಧಿಸಿದೆ.
ಭಾರತೀಯ ಸ್ಟಾರ್ ಆಟಗಾರ ಶುಬ್ಮನ್ ಗಿಲ್ ಹೊಡೆದ ಅದ್ಭುತ ಶತಕ ಮತ್ತು ಮೊಹಮ್ಮದ್ ಶಮಿ ಪಡೆದ ಐದು ವಿಕೆಟ್ ಬಾಂಗ್ಲಾದೇಶ ತಂಡದ ಸೋಲಿಗೆ ಪ್ರಮುಖ ಕಾರಣಗಳಾಗಿದ್ದರೂ, ಶಾಂತೋ ಈ ವಿಚಾರದಲ್ಲಿ ದುರಂಹಂಕಾರ ತೋರಿದ್ದಾರೆ. ಅವರಿಬ್ಬರ ಆಟವನ್ನು ಹೊಗಳುವ ಬದಲು ಪವರ್‌ಪ್ಲೇನಲ್ಲಿ ವಿಕೆಟ್ ಕಳೆದುಕೊಂಡಿರುವುದೇ ಸೋಲಿಗೆ ಕಾರಣ ಎಂದಿದ್ದಾರೆ. ಜತೆಗೆ ಕಳಪೆ ಫೀಲ್ಡಿಂಗ್ ಕೂಡ ಸೋಲಿಗೆ ಕಾರಣವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ಶಾಂತೋ ಹೇಳಿದ್ದೇನು?
ಪವರ್‌ಪ್ಲೇನಲ್ಲಿ ಐದು ವಿಕೆಟ್ ಕಳೆದುಕೊಂಡುದೇ ನಮ್ಮ ಸೋಲಿಗೆ ಪ್ರಮುಖ ಕಾರಣ. ಹೃದೊಯ್ ಮತ್ತು ಜಾಕರ್ ಅತೀ ಉತ್ತಮವಾಗಿ ಬ್ಯಾಟ್ ಮಾಡಿದರು. ಆದರೆ ನಾವು ಇನ್ನೂ ಉತ್ತಮವಾಗಿ ಆಡಬೇಕಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ನಾವು ಕೆಲ ಕ್ಯಾಚ್‌ಗಳನ್ನು ಕೈಚೆಲ್ಲಿದ್ದೇವೆ. ಕೆಲವು ರನ್‌ಔಟ್ ಅವಕಾಶಗಳನ್ನು ಕಳೆದುಕೊಂಡೆವು ಎಂದು ಶಾಂತೊ ಹೇಳಿದ್ದಾರೆ. ಆದರೆ, ತೌಹಿದ್ ಹೃದೊಯ್ (100) ಮತ್ತು ಜಾಕರ್ ಅಲಿ (68) ಮುಂದಿನ ಪಂದ್ಯಗಳಲ್ಲೂ ಉತ್ತಮ ಬ್ಯಾಟಿಂಗ್ ಮಾಡಬೇಕು ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. .
ಹೊಸ ಚೆಂಡಿನಿಂದ ವಿಕೆಟ್ ಪಡೆದಿದ್ದರೆ, ಪಂದ್ಯ ಫಲಿತಾಂಶ ಬೇರೆಯಾಗಬಹುದಾಗಿತ್ತು ಎಂದು ಹೇಳಿದರು. ಮುಂಬರುವ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ತಂಡ ಸಜ್ಜಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಹೊಸ ಚೆಂಡಿನಲ್ಲಿ ವಿಕೆಟ್ ಪಡೆದಿದ್ದರೆ, ಫಲಿತಾಂಶ ಬೇರೆಯಾಗಿರಬಹುದಿತ್ತು. ನಾವು ಪಾಕಿಸ್ತಾನ ವಿರುದ್ಧ ಇತ್ತೀಚೆಗೆ ಅಲ್ಲೇ (ರಾವಲ್ಪಿಂಡಿಯಲ್ಲಿ) ಆಡಿದ್ದೇವೆ. ಆ ಸ್ಥಳದ ಪರಿಸ್ಥಿತಿಗೆ ನಮ್ಮ ಆಟಗಾರರು ಹೊಂದಿಕೊಳ್ಳುತ್ತಾರೆ ಎಂದು ನನಗೆ ಖಚಿತವಾಗಿದೆ ಎಂದು ಶಾಂತೊ ಹೇಳಿದ್ದಾರೆ.
ಏಕ ದಿನ ವಿಶ್ವ ಕಪ್ನಲ್ಲಿ ಭಾರತ ವಿರುದ್ಧ ಸೋತಿದ್ದ ಬಾಂಗ್ಲಾ
ಅಕ್ಟೋಬರ್ 19, 2023ರಂದು ಪುಣೆಯಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲೂ ಬಾಂಗ್ಲಾದೇಶ ತಂಡ ಭಾರತ ವಿರುದ್ಧ ಬಹಳ ಸಣ್ಣ ಮೊತ್ತಕ್ಕೆ ಔಟಾಗಿತ್ತು. ಅಲ್ಲಿಯೂ ಬಾಂಗ್ಲಾದೇಶ 256 ರನ್ ಮಾಡಿದ್ದರೆ ಭಾರತ ಸುಲಭವಾಗಿ ಚೇಸ್ ಮಾಡಿತ್ತು.
ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಉತ್ತಮ ಆರಂಭ ಪಡೆದಿತ್ತು ಓಪನರ್‌ಗಳಾದ ತನ್ಜಿದ್ ಹಸನ್ (51) ಮತ್ತು ಲಿಟನ್ ದಾಸ್ (66) 93 ರನ್ ಜೊತೆಯಾಟ ನೀಡಿ ಉತ್ತಮ ಅಡಿಪಾಯ ಹಾಕಿದ್ದರು. ಕುಲ್ದೀಪ್ ಯಾದವ್ ಅವರ ಬೌಲಿಂಗ್‌ಗೆ ತನ್ಜಿದ್ ಬಲಿಯಾಗಿದ್ದರು. ಲಿಟನ್ ದಾಸ್ ರವೀಂದ್ರ ಜಡೇಜಾ ಅವರ ಎಸೆತಕ್ಕೆ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅನುಕೂಲಕರ ಪ್ರದರ್ಶನ ನೀಡಲಾಗಲಿಲ್ಲ. ನಜ್ಮುಲ್ ಹೋಸೈನ್ ಶಾಂತೋ, ಮೆಹಿದಿ ಹಸನ್ ಮಿರಾಜ್ ಮತ್ತು ತೌಹಿದ್ ಹೃದೊಯ್ ಔಟಾಗಿದ್ದರು. . ಮುಷ್ಫಿಕರ್ ರಹೀಂ (38) ಮತ್ತು ಮಹಮುದುಲ್ಲಾ (46) ಆಟವನ್ನು ಪುನಶ್ಚೇತನಗೊಳಿಸಲು ಪ್ರಯತ್ನಿಸಿದರೂ, ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಕಾರಣ ದೊಡ್ಡ ಮೊತ್ತ ಬಾರಿಸಲಾಗಲಿಲ್ಲ.
ಬೌಲಿಂಗ್ನಲ್ಲಿ ಹಸನ್ ಮಹಮೂದ್ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದ್ದರು. ಮೆಹಿದಿ ಹಸನ್ ಮಿರಾಜ್ ಶುಬ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ವಿಕೆಟ್ ಕಳೆದುಕೊಳ್ಳುವಂತೆ ಮಾಡಿದ್ದರು. ಆದರೆ, ಭಾರತ ವಿರಾಟ್ ಕೊಹ್ಲಿ ಅವರ ಅದ್ಭುತ ಶತಕದ ನೆರವಿನಿಂದ 51 ಎಸೆತ ಬಾಕಿ ಇರುವಾಗಲೇ 7 ವಿಕೆಟ್ ಜಯ ಸಾಧಿಸಿತ್ತು.