ಬೆಂಗಳೂರು: ಮುಡಾ ಪ್ರಕರಣದಲ್ಲಿ ಇ.ಡಿ ವಿಚಾರಣೆಯಿಂದ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ಗೆ ಹೈಕೋರ್ಟ್ ಮಧ್ಯಂತರ ರಕ್ಷಣೆ ಮತ್ತೊಮ್ಮೆ ಸಿಕ್ಕಿದೆ.
ಸಮನ್ಸ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಧಾರವಾಡ ಹೈಕೋರ್ಟ್‌ನಲ್ಲಿ ನಡೆಯಿತು. ಸಮನ್ಸ್ ರದ್ದು ಕೋರಿದ್ದ ಅರ್ಜಿಗೆ ಇ.ಡಿ ಪರ ಹಿರಿಯ ವಕೀಲ ಅರವಿಂದ ಕಾಮತ್ ಸುದೀರ್ಘ 144 ಪುಟಗಳ ಆಕ್ಷೇಪ ಸಲ್ಲಿಕೆ ಮಾಡಿದರು.
ವಕೀಲ ಅರವಿಂದ್ ಚೌಟ ಅವರು ಸುಪ್ರೀಂ ಕೋರ್ಟ್‌ಗಳ ವಿವಿಧ ಆದೇಶ ಉಲ್ಲೇಖಿಸಿ ಅರವಿಂದ್ ಚೌಟ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಆದೇಶ ಕಾಯ್ದಿರಿಸಿದೆ. ಅಂತಿಮ ಆದೇಶದ ತನಕ ಮಧ್ಯಂತರ ರಕ್ಷಣೆ ಮುಂದುವರೆಸುವುದಾಗಿ ಹೇಳಿದೆ.