ಚಿಕ್ಕಬಳ್ಳಾಪುರ: ಗಾಂಜಾ ಸಾಗಾಟ ಮಾಡುತ್ತಿದ್ದ ಒಂದೇ ಕುಟುಂಬದವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗರಿಗೆರೆಡ್ಡಿಪಾಳ್ಯದಲ್ಲಿ ನಡೆದಿದೆ. ಗರಿಗೆರೆಡ್ಡಿಪಾಳ್ಯದ ನಿವಾಸಿಗಳಾಗಿರುವ ಮಾರಪ್ಪ, ಮಾರಪ್ಪನ ಮಗಳು ದೇವಮ್ಮ, ದೇವಮ್ಮನ ಮಗ ಆಂಜಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಜಿಲ್ಲೆಯ ಚಿಂತಾಮಣಿ ನಗರದ ಮಾಡಿಕೆರೆ ಕ್ರಾಸ್ ಬಳಿ ಮಹಿಂದ್ರಾ ಎಕ್ಸ್ ಯುವಿ 500 ಕಾರಿನಲ್ಲಿ 17 ಲಕ್ಷದ 50 ಸಾವಿರ ರೂ. ಮೌಲ್ಯದ 35 ಕೆಜಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಂದೆ, ಮಗಳು, ಮೊಮ್ಮಗನ ಮೇಲೆ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಸೇರಿದಂತೆ ತುಮಕೂರು ಜಿಲ್ಲೆಗಳಲ್ಲಿ ಗಾಂಜಾ ಮಾರಾಟ, ಸಾಗಟದ ಕೇಸ್ಗಳಿವೆ. ಆದರೂ ಬುದ್ದಿ ಕಲಿಯದ ಇವರು ಜೈಲಿಗೆ ಹೋಗುವುದು ಮತ್ತೆ ಜಾಮೀನು ಮೇಲೆ ಆಚೆ ಬರುವುದು, ಗಾಂಜಾ ಮಾರಾಟ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿದ್ದರು ಎನ್ನಲಾಗಿದೆ.