ಬೆಂಗಳೂರು: ರಾಷ್ಟ್ರದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ದೊಡ್ಡ ಯಡವಟ್ಟು ಒಂದು ನಡೆದಿತ್ತು.
ರಾಜಧಾನಿಗೆ ಬಂದ ಸಂದರ್ಭದಲ್ಲಿ ಅವರು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ಹೆಡ್ ಕಾನ್ಸಟೇಬಲ್ ಮೇಲೆ ಬೈಕ್ ಹತ್ತಿಸಿ ಪುಂಡಾಟ ಮೆರೆದಿದ್ದ. ಫೆ. 9 ರಂದು ರಾಜಧಾನಿ ಬೆಂಗಳೂರಿಗೆ ರಾಜನಾಥ್ ಸಿಂಗ್, ಬಂದಿದ್ದ ಸಂದರ್ಭದಲ್ಲಿ ಮಧ್ಯಾಹ್ನ 1:50 ಕ್ಕೆ ಅನಿಲ್ ಕುಂಬ್ಳೆ ಸರ್ಕಲ್ ಬಳಿ ರಾಜನಾಥ್ ಸಿಂಗ್ ಹಾಗೂ ಅವರ ಕಾನ್ವೆ ತೆರಳುತ್ತಿತ್ತು. ಈ ವೇಳೆ ಪುಂಡನೊಬ್ಬ ಪೊಲೀಸ್ ಭದ್ರತೆ ಮೀರಿ ನುಗ್ಗಿದ್ದ.
ಆಹಮ್ಮದ್ ದಿಲ್ವಾರ್ ಹುಸೇನ್ ಎಂಬಾತ ಪೊಲೀಸರು ತಡೆದರೂ ಬೈಕ್ ನುಗ್ಗಿಸಿದ್ದ. ತಡೆಯಲು ಬಂದಿದ್ದ ಹೆಡ್ ಕಾನ್ಸಟೇಬಲ್ ದಿನೇಶ್ ಎಂಬುವವರ ಮೇಲೆ ಬೈಕ್ ಹತ್ತಿಸಿಕೊಂಡು ಹೋಗಿದ್ದ. ಅದೃಷ್ಟವಶಾತ್ ಅಷ್ಟರಲ್ಲಿ ರಕ್ಷಣಾ ಮಂತ್ರಿ ಕಾನ್ವೇ ಮುಂದಕ್ಕೆ ಹೋಗಿತ್ತು. ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪೇದೆ ದೂರು ನೀಡಿದ್ದರು. ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.