ಬೆಂಗಳೂರು: ರಾಜ್ಯದ ಸುಮಾರು 70 ಸಾವಿರ ತಂಬಾಕು ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅತಿವೃಷ್ಟಿಯಿಂದ ಹಾನಿಗೊಳಗಾದ ರಾಜ್ಯದ ತಂಬಾಕು (ಎಫ್ ಸಿವಿ) ಬೆಳೆಗಾರರಿಗೆ ಕೇಂದ್ರ ಸರ್ಕಾರವು ಹೆಚ್ಚುವರಿ ಶುಲ್ಕವಿಲ್ಲದೆ ತಂಬಾಕು ಮಂಡಳಿಯ ಹರಾಜಿನಲ್ಲಿಹೆಚ್ಚುವರಿ ಮತ್ತು ಅನಧಿಕೃತ ತಂಬಾಕು ಮಾರಾಟಕ್ಕೆ ಅವಕಾಶ ಕಲ್ಪಿಸುವ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ತಂಬಾಕು ಬೆಳೆಗಾರರಿಗೆ ಭಾರಿ ಅನುಕೂಲವಾಗಲಿದೆ.
ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರದ ನಿರ್ಧಾರವನ್ನು ರಾಜ್ಯಸಭೆ ಬಿಜೆಪಿ ಸದಸ್ಯ ಲೆಹರ್ಸಿಂಗ್ ಸಿರೋಯಾ ಅವರು ಶ್ಲಾಘಿಸಿದ್ದಾರೆ. ಕೇಂದ್ರ ಸರ್ಕಾರ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೂಲಕ ಕರ್ನಾಟಕದ ರೈತರಿಗೆ ಭಾರಿ ಅನುಕೂ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಶೇ.85ರಷ್ಟು ಭೂಮಿಯು ಎಫ್ಸಿವಿ ತಂಬಾಕು ಬೆಳೆಯಲಾಗುವ ಪ್ರದೇಶವಾಗಿದೆ. ಮುಖ್ಯವಾಗಿ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ, ಪಿರಿಯಾಪಟ್ಟಣ, ಹುಣಸೂರು ಮತ್ತು ಕೆ.ಆರ್. ನಗರದಲ್ಲಿಹೆಚ್ಚಿನ ಪ್ರದೇಶ ಹೊಂದಿದೆ. ಉಳಿದಂತೆ ಶೇ.15ರಷ್ಟು ಪ್ರದೇಶ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿದೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ರಾಜ್ಯದಲ್ಲಿನಷ್ಟಕ್ಕೊಳಗಾದ ರೈತರಿಗೆ ನೆರವಾಗಲಿದೆ ಎಂದಿದ್ದಾರೆ.