ರಾಯಚೂರು: ಬಿಸಿಲ ನಾಡು ರಾಯಚೂರಿನಲ್ಲಿರುವ ಹಟ್ಟಿ ಚಿನ್ನದ ಗಣಿಯು ಸರ್ಕಾರಿ ಸ್ವಾಮ್ಯದ ಗಣಿ ಕಂಪನಿಯಾಗಿದೆ. ಪ್ರತಿ ವರ್ಷ ಸಾವಿರಾರು ಕೆ.ಜಿ. ಚಿನ್ನವನ್ನು ಹೊರತೆಗೆಯಲಾಗುತ್ತದೆ. 2024-25ನೇ ಹಣಕಾಸು ವರ್ಷದ ಜನವರಿ ಅಂತ್ಯಕ್ಕೆ ಹಟ್ಟಿ ಚಿನ್ನದ ಗಣಿಯಲ್ಲಿ 1,179 ಕೆ.ಜಿ ಚಿನ್ನವನ್ನು ಹೊರತೆಗೆಯಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 1,346 ಕೆ.ಜಿ. ಚಿನ್ನ ಉತ್ಪಾದಿಸುವ ಗುರಿ ಹೊಂದಿದ್ದು, ಗುರಿ ಸಾಧನೆಯತ್ತ ಲಗ್ಗೆ ಇರಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ1,700 ಕೆ.ಜಿ. ಚಿನ್ನ ಉತ್ಪಾದನೆಯ ಗುರಿಯಲ್ಲಿಶೇ.95ರಷ್ಟು ಸಾಧನೆಯ ವಿಶ್ವಾಸವಿದೆ. ಇನ್ನೊಂದೆಡೆ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 85,000 ರೂ.ಗಳಿಗೂ ಹೆಚ್ಚಿರುವುದರಿಂದ ಉತ್ಪಾದನೆಯಲ್ಲಿಅಲ್ಪಸ್ವಲ್ಪ ಏರಿಳಿತ ಕಂಡರೂ ಯಾವ ಪರಿಣಾಮ ಬೀರುವುದಿಲ್ಲ ಎಂದು ಹಟ್ಟಿ ಚಿನ್ನದಗಣಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್ ಮಾಹಿತಿ ನೀಡಿದ್ದಾರೆ.
2024ರ ಏಪ್ರಿಲ್ನಲ್ಲಿ118 ಕೆ.ಜಿ., ಮೇ ವೇಳೆ 90 ಕೆ.ಜಿ., ಜೂನ್ನಲ್ಲಿ110 ಕೆ.ಜಿ., ಜುಲೈನಲ್ಲಿ150 ಕೆ.ಜಿ., ಆಗಸ್ಟ್ನಲ್ಲಿ127 ಕೆ.ಜಿ., ಸೆಪ್ಟೆಂಬರ್ನಲ್ಲಿ163 ಕೆ.ಜಿ., ಅಕ್ಟೋಬರ್ನಲ್ಲಿ101 ಕೆ.ಜಿ., ನವೆಂಬರ್ನಲ್ಲಿ91 ಕೆ.ಜಿ., ಡಿಸೆಂಬರ್ನಲ್ಲಿ102 ಕೆ.ಜಿ. ಹಾಗೂ 2025ರ ಜನವರಿಯಲ್ಲಿ122 ಕೆ.ಜಿ. ಚಿನ್ನ ಉತ್ಪಾದಿಸಲಾಗಿದೆ. 6,35,000 ಮೆಟ್ರಿಕ್ ಟನ್ ಅದಿರು ಉತ್ಪಾದಿಸುವ ಗುರಿಯಲ್ಲಿ5,38,000 ಮೆಟ್ರಿಕ್ ಟನ್ ಅದಿರು ಉತ್ಪಾದನೆ ದಾಖಲಾಗಿದೆ.