ಬೆಂಗಳೂರು: ಇಬ್ಬರು ಯುವಕರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಡ್ರಗ್ಸ್ ನಿಂದಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಇಲ್ಲಿಯ (Bengaluru) ಹೊರವಲಯದ ಆನೇಕಲ್ ನಲ್ಲಿ (Anekal) ಈ ಘಟನೆ ನಡೆದಿದೆ. ಸೂರ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಯಾರಂಡಹಳ್ಳಿ ಹತ್ತಿರ ಇದ್ದ ಅಸ್ಸಾಂ ಮೂಲದ ದಿವಾನ್ ಅಫ್ರೀದಿ ಅಲಿ ಹಾಗೂ ಅಶ್ರಫ್ ಅಲಿ ಸಾವನ್ನಪ್ಪಿದವರು ಎನ್ನಲಾಗಿದೆ.
ಯಾರಂಡಹಳ್ಳಿಯಲ್ಲಿನ ಬಾಡಿಗೆ ಮನೆಯಲ್ಲಿ ಇಬ್ಬರೂ ವಾಸಿಸುತ್ತಿದ್ದರು. ಇಬ್ಬರು ಸಿರಿಂಜ್ ಮೂಲಕ ಡ್ರಗ್ಸ್ ಇಂಜೆಕ್ಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಓರ್ವ ಮಲಗಿದ್ದಲ್ಲೇ ಸಾವನ್ನಪ್ಪಿದರೆ, ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಅಡಿಷನಲ್ ಎಸ್‍ಪಿ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.