ಬೆಂಗಳೂರು: ಬುದ್ಧಿವಾದ ಹೇಳಿದ್ದಕ್ಕೆ ಪಾಪಿ ಮಗನೊಬ್ಬ ತಂದೆಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ನಗರದ (Bengaluru) ಬ್ಯಾಡರಹಳ್ಳಿಯ (Byadarahalli) ತಿಗಳರಪಾಳ್ಯದ ಕೆರೆಯ ಮುನೇಶ್ವರ ದೇವಸ್ಥಾನದ ಹತ್ತಿರ ನಡೆದಿದೆ. ಮಾಜಿ ಸೈನಿಕ ಚನ್ನಬಸಪ್ಪ (61) ಮಗನಿಂದಲೇ ಹತರಾದ ದುರ್ದೈವ ತಂದೆ. ಚನ್ನಬಸಪ್ಪ ಅವರು ನಿವೃತ್ತಿ ನಂತರ ನೈಸ್ ರಸ್ತೆಯಲ್ಲಿ ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದರು. ಅಮಿತ್ (21) ಕೊಲೆ ಮಾಡಿರುವ ಪಾಪಿ ಮಗ.
ಅಮಿತ್ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಕಿಡಿಗೇಡಿಗಳೊಂದಿಗೆ ಸ್ನೇಹ ಬೆಳೆಸಿ ಮದ್ಯ ಸೇವಿಸುವುದು ಹಾಗೂ ಮಾದಕ ವಸ್ತುಗಳ ಚಟಕ್ಕೆ ದಾಸನಾಗಿದ್ದ. ಈ ವಿಚಾರವಾಗಿ ತಂದೆ ಹಾಗೂ ಮಗನೊಂದಿಗೆ ಗಲಾಟೆ ನಡೆಯುತ್ತಿತ್ತು. ಸೋಮವಾರ ಕೂಡ ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದೆ. ಆಗ ತಂದೆ ಮಗನಿಗೆ ಬುದ್ಧಿವಾದ ಹೇಳಿದ್ದಾರೆ. ಸಂಪಾದನೆ ಮಾಡಿ ಉತ್ತಮರಂತೆ ಜೀವನ ಸಾಗಿಸು ಎಂದು ಬುದ್ಧಿವಾದ ಹೇಳಿದ್ದಾರೆ.
ಇದಕ್ಕೆ ಕೋಪಗೊಂಡ ಪಾಪಿ ಮಗ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ರಕ್ತದ ಮೊಡವಿನಲ್ಲಿ ಬಿದ್ದಿದ್ದ ಚನ್ನಬಸಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬೇಟಿ ನೀಡಿದ ಬ್ಯಾಡರಹಳ್ಳಿ ಪೊಲೀಸರು, ಕೊಲೆ ಮಾಡಿ, ಎಣ್ಣೆ ಮತ್ತಿನಲ್ಲೇ ಮಲಗಿದ್ದ ಆರೋಪಿ ಅಮಿತ್ ಗೆ ನೀರು ಹಾಕಿ ಎಬ್ಬಿಸಿ ವಶಕ್ಕೆ ಪಡೆದಿದ್ದಾರೆ.