ನವದೆಹಲಿ: ಭಾರತ ತನ್ನ ಚಾಂಪಿಯನ್ಸ್ ಟ್ರೋಫಿ 2025 ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ (DICS)ನ ಪಿಚ್ ಪರಿಸ್ಥಿತಿ ಹೇಗಿರಬಹುದು ಎಂಬುದರ ಬಗ್ಗೆ ದೊಡ್ಡ ಕುತೂಹಲ ಇದೆ. ಚಾಂಪಿಯನ್ಸ್ ಟ್ರೋಫಿ 2025 ಫೆಬ್ರವರಿ 19ರಿಂದ ಪಾಕಿಸ್ತಾನದಲ್ಲಿ ಆರಂಭಗೊಳ್ಳಲಿದ್ದು, ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ್ದರಿಂದ, ದುಬೈ ಹೈಬ್ರಿಡ್ ಸ್ಟೇಡಿಯಮ್ ಆಗಿದೆ.
ದುಬೈ ಸ್ಟೇಡಿಯಂ ಸಾಮಾನ್ಯವಾಗಿ ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿರುವ ಪಿಚ್‌ಗಳಿಗಾಗಿ ಪ್ರಸಿದ್ಧ. ಹಾಗೆಯೇ ನಿಧಾನಗತಿಯಲ್ಲಿ ಪಿಚ್‌ಗಳು ಹೆಚ್ಚು ಕಂಡುಬರುತ್ತವೆ. ಆದರೆ, ವರದಿಯ ಪ್ರಕಾರ, ಭಾರತವು ತನ್ನ ಚಾಂಪಿಯನ್ಸ್ ಟ್ರೋಫಿ ಲೀಗ್ ಪಂದ್ಯಗಳನ್ನು ಒಣಗಿದ, ನಿಧಾನಗತಿಯ ಪಿಚ್‌ಗಳಲ್ಲಿ ಆಡಬೇಕಾಗಿಲ್ಲ. ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟ್ ತಂಡದ ಆಟಕ್ಕಾಗಿ ಸುಧಾರಿತ 22-ಯಾರ್ಡ್ ಪಿಚ್‌ಗಳನ್ನು ಮೀಸಲಿಡಲಾಗಿದೆ.
ಭಾರತವು ತನ್ನ ಮೂರು ಲೀಗ್ ಪಂದ್ಯಗಳನ್ನು ಫೆಬ್ರವರಿ 20ರಂದು ಬಾಂಗ್ಲಾದೇಶ, ಫೆಬ್ರವರಿ 23ರಂದು ಪಾಕಿಸ್ತಾನ ಮತ್ತು ಮಾರ್ಚ್ 2ರಂದು ನ್ಯೂಜಿಲ್ಯಾಂಡ್ ವಿರುದ್ಧ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಲಿದೆ.
ಕಳೆದ ವರ್ಷದ ಮಹಿಳಾ ಟಿ20 ವಿಶ್ವಕಪ್ ನಂತರ ಪುರುಷರ ಅಂಡರ್-19 ಏಷ್ಯಾಕಪ್ ಮತ್ತು ಎಮಿರೇಟ್ಸ್ ಕ್ರಿಕೆಟ್ ಬೋರ್ಡ್‌ನ ಪ್ರಮುಖ ಟೂರ್ನಮೆಂಟ್ ಐಎಲ್ ಟಿ20 ಲೀಗ್ ಅನ್ನು ಇಲ್ಲಿ ಆಡಲಾಗಿದೆ.
ಭಾರತ ತಂಡದ ಆಟಕ್ಕಾಗಿ ಎರಡು ಪಿಚ್
ಈ ಸ್ಟೇಡಿಯಮ್ನಲ್ಲಿ ಒಟ್ಟು 15 ಐಎಲ್ ಟಿ20 ಪಂದ್ಯಗಳು ನಡೆದಿದ್ದವು. ಇದರಲ್ಲಿ 2 ಪಂದ್ಯಗಳು ನಾಕೌಟ್ ಹಂತದ್ದು. 13 ಲೀಗ್ ಪಂದ್ಯಗಳು ನಡೆಯುವಾಗ ಎರಡು ಪಿಚ್‌ಗಳನ್ನು ಸಂಪೂರ್ಣವಾಗಿ ಬಳಸಿಲ್ಲ, ಅವುಗಳನ್ನು ಚಾಂಪಿಯನ್ಸ್ ಟ್ರೋಫಿಗೆ ಮೀಸಲಿಡಲಾಗಿದೆ.
ದುಬೈ ಸ್ಟೇಡಿಯಮ್ನಲ್ಲಿ 10 ಮ್ಯಾಚ್ ಪಿಚ್‌ಗಳು ಇವೆ. ಅದರಲ್ಲಿ ಎರಡು ಪಿಚ್ಗಳನ್ನು ಚಾಂಪಿಯನ್ಸ್ ಟ್ರೋಫಿಗಾಗಿ ತಾಜಾ ಸ್ಥಿತಿಯಲ್ಲಿ ಇಡಲಾಗಿದೆ. ಪಿಚ್ ಹೆಚ್ಚು ಬಳಸಿದ ನಂತರ ನಿಧಾನವಾಗುತ್ತದೆ. ಈ ಹೊಸ ಪಿಚ್‌ಗಳು ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಗೆ ಸಮಾನವಾಗಿ ನೆರವಾಗಲಿವೆ,” ಎಂದು ಮೂಲವೊಂದು ತಿಳಿಸಿದೆ.
ಸ್ಪಿನ್ನರ್ಗಳೂ ನಿರ್ಣಾಯಕ
ಭಾರತವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗ್ರೂಪ್ ಹಂತದಲ್ಲಿ ಫೆಬ್ರವರಿ 20ರಂದು ಬಾಂಗ್ಲಾದೇಶ, ಫೆಬ್ರವರಿ 23ರಂದು ಪಾಕಿಸ್ತಾನ ಮತ್ತು ಮಾರ್ಚ್ 2ರಂದು ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ. ಸಾಂಪ್ರದಾಯಿಕವಾಗಿ, ದುಬೈ ಪಿಚ್ ವೇಗದ ಬೌಲರ್‌ಗಳಿಗೆ ಹೆಚ್ಚು ಅನುಕೂಲವಾಗಿದ್ದರೂ, ಈ ಬಾರಿ ಸ್ಪಿನ್ನರ್‌ಗಳು ಕೂಡ ನಿರ್ಣಾಯಕ ಪಾತ್ರ ವಹಿಸಬಹುದು.