ಬೆಂಗಳೂರು: ನಾಯಕಿ ಸ್ಮತಿ ಮಂಧಾನ ಅವರ ವಿಸ್ಫೋಟಕ ಅರ್ಧಶತಕ (81) ಮತ್ತು ಬೌಲರ್ಗಳ ಸಂಘಟಿತ ಪ್ರಯತ್ನದ ಫಲವಾಗಿ ಮಿಂಚಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ (WPL2025) ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದೆ. ಈ ಮೂಲಕ ಹಾಲಿ ಆವೃತ್ತಿಯಲ್ಲಿ ಸತತ 2ನೇ ಜಯ ಕಂಡಿದೆ.
ಕಳೆದ ಪಂದ್ಯದಲ್ಲಿ ದಾಖಲೆಯ ಚೇಸ್ ಮಾಡಿದ್ದ ಆರ್ಸಿಬಿ, ತನ್ನ 2ನೇ ಪಂದ್ಯದಲ್ಲಿ ಮತ್ತೊಂದು ದಾಖಲೆ ಸೃಷ್ಟಿಸುವ ಜೊತೆಗೆ ಸುಲಭವಾಗಿ ಗೆದ್ದು ಬೀಗಿದೆ. ಅದೇ ರೀತಿ ಕಳೆದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಜಯಿಸಿದ್ದ ಡೆಲ್ಲಿ 8ವಿಕೆಟ್‌ಗಳ ಅಂತರದಿಂದ ಸೋಲನುಭವಿಸಿದೆ.
ವಡೋದರಾದ ಕೋಟಂಬಿ ಕ್ರಿಕೆಟ್ ಮೈದಾನದಲ್ಲಿ ನಡೆದ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಆರ್ಸಿಬಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡವು ಜೆಮಿಮಾ ರೋಡ್ರಿಗಸ್ ಅವರ 34 ರನ್ಗಳ ನೆರವಿನಿಂದ 19.3 ಓವರ್ಗಳಲ್ಲಿ 141 ರನ್ ಗಳಿಸಿ ಆಲೌಟ್ ಆಯಿತು.
ಈ ಸಾಧಾರಣ ಗುರಿ ಬೆನ್ನಟ್ಟಿದ ಆರ್ಸಿಬಿ ಬಳಗ 16.2 ಓವರ್ಗಳಲ್ಲಿ ಗೆದ್ದು ಬೀಗಿತು. ಸ್ಮೃತಿ ಮಂಧಾನ 81 ರನ್ ಬಾರಿಸಿ ಅಭಿಮಾನಿಗಳನ್ನು ಖುಷಿ ಪಡಿಸಿದರು. ಡೇನಿಯಲ್ ವ್ಯಾಟ್ 42 ರನ್ ಸಿಡಿಸಿ ಸುಲಭವಾಗಿ ಚೇಸ್ಗೆ ನೆರವಾದರು.