ಮಂಡ್ಯ: ಪಿಎಸ್ ಎಸ್ ಕೆ ಕಾರ್ಖಾನೆಯಲ್ಲಿ 45 ನೌಕರಸ್ಥರನ್ನು ವಜಾಗೊಳಿಸಿದ್ದಕ್ಕೆ ಚಿಮಿನಿ ಏರಿ ಕಾರ್ಮಿಕ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
5 ವರ್ಷಗಳ ಹಿಂದೆ ನಷ್ಟದ ನೆಪವೊಡ್ಡಿದ ಸರ್ಕಾರವು ಪಾಂಡವಪುರದ PSSK ಸಹಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಯನ್ನು (Sugar factory )ಖಾಸಗೀಕರಣಗೊಳಿಸಿತ್ತು. ಆರಂಭದಲ್ಲಿ ನೌಕರರನ್ನು ಕೆಲಸದಿಂದ ವಜಾ ಮಾಡುವುದಿಲ್ಲ ಎಂದು ಆಡಳಿತ ಮಂಡಳಿ ಹೇಳಿತ್ತು. ಈಗ ನೌಕರರನ್ನು ಕೆಲಸದಿಂದ ವಜಾ ಮಾಡಿದೆ. ಈ ವೇಳೆ ಕಾರ್ಮಿಕನೊಬ್ಬ ಚಿಮಿನಿ ಏರಿ ಪ್ರತಿಭಟನೆ ಮಾಡಿದ್ದಾನೆ.
ಕಾರ್ಮಿಕ ರಾಮಕೃಷ್ಣ ಆಡಳಿತ ಮಂಡಳಿಯ ನಿರ್ಧಾರವನ್ನು ವಿನೂತನವಾಗಿ ಖಂಡಿಸಿದರು. ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಒಂದು ಕಾಲದಲ್ಲಿ ಪ್ರತಿಷ್ಠಿತ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾಗಿತ್ತು. ಕಳೆದ 5 ವರ್ಷಗಳ ಹಿಂದೆ ಅಂದಿನ ಸರ್ಕಾರ ನಷ್ಟದ ಕಾರಣ ಹೇಳಿ ಮುರುಗೇಶ್ ನಿರಾಣಿ ಮಾಲೀಕತ್ವದ ನಿರಾಣಿ ಶುಗರ್ಸ್ ಸಂಸ್ಥೆಗೆ 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಿತ್ತು. ಆದರೆ, ಮುರುಗೇಶ್ ನಿರಾಣಿ ಶುಗರ್ಸ್‌ನವರು ಈಗ ಮಾಡಿಕೊಂಡ ಒಪ್ಪಂದಗಳನ್ನು ಮುರಿಯುತ್ತ ಬರುತ್ತಿದೆ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 45 ಜನ ನೌಕರರನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಿದೆ. ಇದರಿಂದ ಕಾರ್ಖಾನೆ ಉದ್ಯೋಗ ನಂಬಿ ಬದುಕು ಸಾಗಿಸುತ್ತಿದ್ದ ಕುಟುಂಬಗಳೀಗ ಬೀದಿಗೆ ಬಂದಂತಾಗಿದ್ದು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.