ಕೋಲಾರ: ಪೀಠೋಪಕರಣ(Furniture Shop)ದ ಅಂಗಡಿಗೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ(Short Circuit) ಬೆಂಕಿ ಕಾಣಿಸಿಕೊಂಡ ಪರಿಣಾಮ ವಸ್ತುಗಳೆಲ್ಲ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಈ ಘಟನೆ ಕೋಲಾರದಲ್ಲಿ (Kolar) ನಡೆದಿದೆ. ಅಂಗಡಿಯೊಂದಿಗೆ ಗೋಡೌನ್ ಕೂಡ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಪ್ರವಾಸಿ ಮಂದಿರದ ಹತ್ತಿರ ಇರುವ ಡಿಲಕ್ಸ್ ಎಂಟರ್ಪ್ರೈಸ್ ಫರ್ನಿಚರ್ ಅಂಗಡಿಯೇ ಹೊತ್ತಿ ಉರಿದಿದೆ.
ಶೌಕತ್ ಎಂಬುವವರಿಗೆ ಸೇರಿದ ಫರ್ನಿಚರ್ ಅಂಗಡಿ ಹಾಗೂ ಗೋಡೌನ್ ನಲ್ಲಿದ್ದ ಸುಮಾರು ಒಂದೂವರೆ ಕೋಟಿ ರೂ. ಮೌಲ್ಯದ ವಸ್ತುಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಕೂಡಲೇ ಆಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಪೀಠೋಪಕರಣಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಮುಳಬಾಗಿಲು ನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.