ಬೆಂಗಳೂರು: ಬೆಂಗಳೂರಿನ ಬನಶಂಕರಿ 3ನೇ ಹಂತದಲ್ಲಿರುವ ಗುಪ್ತಾ ಕಾಲೇಜಿನ ವಿದ್ಯಾರ್ಥಿಗಳಿಂದ ಲಯನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಪ್ರೇಮಿಗಳ ದಿನಾಚರಣೆಯನ್ನು ವಿಭಿನ್ನ ರೀತಿಯಲ್ಲಿ ಸ್ವಯಂಪ್ರೇರಿತ ರಕ್ತದಾನ ಮಾಡುವುದರ ಮೂಲಕ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಕನ್ನಡ ಚಲನಚಿತ್ರದ ನಟರಾದ ಗಣೇಶ್ ರಾವ್ ಕೇಸರ್ಕರ್ ಮಾತನಾಡುತ್ತಾ ವಿಶ್ವದಾದ್ಯಂತ ಇಂದು ಪ್ರೇಮಿಗಳ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಗುಪ್ತಾ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ತಮ್ಮಲ್ಲಿರುವ ಪ್ರೀತಿ, ಪ್ರೇಮವನ್ನು ತೋರ್ಪಡಿಸಿಕೊಂಡಿರುವುದು ಶ್ಷಾಘನೀಯವಾದ ವಿಚಾರ ಎಂದರು.
ನಂತರ ಲಯನ್ ಮನೋಜ್ ಕುಮಾರ್ ರವರು ಮಾತನಾಡುತ್ತಾ ಗುಪ್ತಾ ಕಾಲೇಜು ಕಳೆದ ೧೮ ವರ್ಷಗಳಿಂದ ಪ್ರೇಮಿಗಳ ದಿನದಂದು ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರೇಮಿಗಳ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ, ಪ್ರೇಮಿಗಳು ಎಂದ ತಕ್ಷಣ ಗಂಡು ಮತ್ತು ಹೆಣ್ಣು ಪ್ರೀತಿಯ ಸಂಬಂಧದ ಜೊತೆಗೆ ಇದು ಇನ್ನೂಬ್ಬರ ಜೀವನವನ್ನು ಉಳಿಸುವುದು ಆಗಿದೆ ಎಂದರು.
\ಬಳಿಕ ಗುಪ್ತಾ ಕಾಲೇಜಿನ ಪ್ರಾಂಶುಪಾಲರಾದ ಸುಧಾಕರ್ ಜಿ.ಆರ್. ಅವರು ಮಾತನಾಡುತ್ತಾ ಗುಲಾಬಿ ಹೂ ಹಂಚಿ ಪ್ರೇಮಿಗಳ ದಿನಾ ಆಚರಿಸುವ ಬದಲು ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಹಾಗೆ ರಕ್ತವು ಪ್ರಕೃತಿ ನಮಗೆ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ರಕ್ತದಾನ ಎಂದರೆ ಒಬ್ಬ ವ್ಯಕ್ತಿಗೆ ಜೀವದಾನ ನೀಡಿದಂತೆ. ನಾವು ನೀಡುವ ರಕ್ತ ಇನ್ನೊಂದು ದಿನ ಬೇರೆಯವರಿಗೆ ಸಹಾಯವಾಗುತ್ತದೆ ಮತ್ತು ರಕ್ತದಾನ ಮಾಡುವುದರಿಂದ ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರಿಂದ ಹೃದ್ರೋಗ ಅಪಾಯವನ್ನು ತಡೆಯಬಹುದು. ೧೮ ವರ್ಷದ ಮೇಲ್ಪಟ್ಟ ಮತ್ತು ೪೫ ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕವಿರುವ ಯಾವುದೇ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು ಎಂದು ತಿಳಿಸಿದರು.
ಗುಪ್ತಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿವರ್ಗದವರನ್ನು ಅಭಿನಂದಿಸಿ ಇಂತಹ ಕಾರ್ಯಕ್ರಮಗಳಿಗೆ ಯುವಜನತೆಯ ಬೆಂಬಲ ತುಂಬ ಅಗತ್ಯ ಎಂದರು, ಈ ಕಾರ್ಯಕ್ರಮದಲ್ಲಿ ಚಲನಚಿತ್ರದ ನಟರಾದ ಗಣೇಶ್ ರಾವ್ ಕೇಸರ್ಕರ್, ಗುಪ್ತಾ ಕಾಲೇಜಿನ ಪ್ರಾಂಶುಪಾಲರಾದ ಸುಧಾಕರ್ ಜಿ.ಆರ್, ಲಯನ್ಸ್ ಸಂಸ್ಥೆಯ ಲಯನ್ ಶ್ರೀನಾಥ್, ಲಯನ್ ಮನೋಜ್ ಕುಮಾರ್, ಲಯನ್ ರಾಜೇಶ್ವರಿ ವಸಂತಯ್ಯ, ಲಯನ್ ವೆಂಕಟೇಶ್, ಲಯನ್ ಜಗದೀಶ್, ಲಯನ್ ಜ್ಯೋತಿ ಶ್ರೀಹರಿ ಲಯನ್ ಸುರೇಶ್ ರವರು ಹಾಗೂ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.