ಡಾಲಿ ಧನಂಜಯ್ ಮತ್ತು ಧನ್ಯತಾ ವಿವಾಹ ಕಾರ್ಯ ಆರಂಭವಾಗಿದೆ. ಡಾಲಿ ಧನಂಜಯ್ ತಮ್ಮ ಹುಟ್ಟೂರು ಕಾಳೇನಹಳ್ಳಿಯಲ್ಲಿ ಕಾರ್ಯಕ್ರಮಗಳು ಆರಂಭವಾಗಿದ್ದವು. ಈಗ ಧನಂಜಯ್ ಮತ್ತು ಧನ್ಯತಾ ಅವರುಗಳು ಮೈಸೂರಿಗೆ ಬಂದಿದ್ದು, ಮೈಸೂರಿನ ರಿವರ್ ರಂಚಿ ರೆಸಾರ್ಟ್ ನಲ್ಲಿ ಅದ್ಧೂರಿಯಾಗಿ ಹಳದಿ ಶಾಸ್ತ್ರ ನಡೆದಿದೆ.
ಹಳದಿ ಶಾಸ್ತ್ರದಲ್ಲಿ ಧನಂಜಯ್ ಕುಟುಂಬದವರು, ಅತ್ಯಾಪ್ತರು, ಧನ್ಯತಾ ಅವರ ಗೆಳತಿಯರು, ಕುಟುಂಬದವರು ಆಗಮಿಸಿದ್ದರು. ಇಂದು ಕೂಡ ಮೈಸೂರಿನಲ್ಲಿ ಕೆಲವು ಮದುವೆ ಶಾಸ್ತ್ರಗಳು ನಡೆಯಲಿವೆ.
ಮೊದಲಿಗೆ 8.10 ರಿಂದ 9.10 ರ ಒಳಗೆ ಗಂಗೆ ತರುವ ಶಾಸ್ತ್ರ ದಿಂದ ಕಾರ್ಯಕ್ರಮಗಳು ಪ್ರಾರಂಭ ಆಗಿವೆ. ಬೆಳಿಗ್ಗೆ 8.10 ರಿಂದ 9.10 ರ ಒಳಗೆ ಗಂಗೆ ತರು ಶಾಸ್ತ್ರ ನಡೆಯಲಿದೆ. ವಧು- ವರ ತಂದೆ ತಾಯಿ ಇಂದ ವಾಗ್ದಾನ ಶಾಸ್ತ್ರ ನಡೆಯಲಿದೆ. ನಂತರ ವಧು-ವರ ನೀರಿಕ್ಷಣ ಶಾಸ್ತ್ರ ನಡೆಯಲಿದೆ. ವಧುವಿಗೆ ಗೌರಿ ಶಾಸ್ತ್ರದ ನಂತರ ಶುದ್ಧ ಬಳೆ ಶಾಸ್ತ್ರ ಮಾಡಲಾಗುತ್ತದೆ. ವಧು- ವರರ ಪ್ರಥಮ ನಿರೀಕ್ಷೆಣ ಶಾಸ್ತ್ರದ ಮೂಲಕ ಇಂದಿನ ಶಾಸ್ತ್ರಗಳ ಮುಕ್ತಾಯ ಆಗಲಿದೆ.
ಸಂಜೆ 6 ಗಂಟೆಯಿಂದ ರಾತ್ರಿ 12 ರ ವರೆಗೂ ಆರತಕ್ಷತೆ ನಡೆಯಲಿದೆ. ಫೆಬ್ರವರಿ 16ರಂದು ಹಲವು ಶಾಸ್ತ್ರಗಳು ನಡೆಯಲಿವೆ. ಮೊದಲಿಗೆ ಮಂಟಪ ದೇವತಾ ಪ್ರವೇಶ ಕಾರ್ಯವನ್ನು ಮಾಡಲಿದ್ದಾರೆ. ಆ ಬಳಿಕ ನವ ಪ್ರಧಾನ ಕಳಶ ಪೂಜೆ ನಡೆಯಲಿದೆ. ಕನ್ಯಾಧಾನ ಸಂಬಂಧ ಮಾಲೆ ಅರ್ಪಣೆ ನಡೆಯಲಿದೆ. ವಧು-ವರರ ಪೋಷಕರ ನಡುವೆ ಕೆಲ ಶಾಸ್ತ್ರಗಳು ನಡೆಯಲಿವೆ. ವಧು ವರರ ಧಾರೆ ಮುಹೂರ್ತ ನಡೆಯಲಿದೆ. 8:10 ರಿಂದ 9:50ರ ನಡುವೆ ಮಾಂಗಲ್ಯ ಧಾರಣೆ ಮಹೋತ್ಸವ ಜರುಗಲಿದೆ.
ಮಾಂಗಲ್ಯ ಧಾರಣೆ ಬಳಿಕ ವಧು-ವರರಿಬ್ಬರೂ ಸಪ್ತಪದಿ ತುಳಿಯಲಿದ್ದಾರೆ. ಅಶ್ವಿನಿ ನಕ್ಷತ್ರ ವೀಕ್ಷಣೆ ಶಾಸ್ತ್ರ ನಡೆಯಲಿದೆ. ಬಾಸಿಂಗ ವಿಸರ್ಜೆ ಶಾಸ್ತ್ರ ನಡೆಯಲಿದೆ, ಬಾಸಿಂಗ ವಿಸರ್ಜನೆ ಮೂಲಕ ಮದುವೆ ಕಾರ್ಯ ಸಂಪನ್ನವಾಗಲಿದೆ. ಮತ್ತೊಮ್ಮೆ ಆರತಕ್ಷತೆ ನಡೆಯಲಿದೆ. ಈ ಮದುವೆಗೆ ಅಭಿಮಾನಿಗಳಿಗೂ ಪ್ರವೇಶವಿದೆ.