ಬೆಂಗಳೂರು: ಬಸ್ ಟಿಕೆಟ್ ದರ ಏರಿಕೆಯಾದ ಬೆನ್ನಲ್ಲೇ ಮೆಟ್ರೋ ದರ ಏರಿಕೆಯಾಯಿತು. ಇವುಗಳೊಂದಿಗೆ ಅಗತ್ಯ ವಸ್ತುಗಳ ಬೆಲೆ ಕೂಡ ದಿನದಿಂದ ದಿನಕ್ಕೆ ಗಗನಕ್ಕೆ ಏರಿಕೆಯಾಗುತ್ತಿವೆ. ಇದರ ಮಧ್ಯೆ ಬೆಂಗಳೂರಿಗೆ ಮತ್ತೊಂದು ಶಾಕ್ ಎದುರಾಗುತ್ತಿದೆ.
ಬಸ್, ಮೆಟ್ರೋ ಟಿಕೆಟ್ ದರ ಏರಿಕೆ ಬಳಿಕ ಮತ್ತೊಂದು ಬ್ಯಾಡ್ ನ್ಯೂಸ್ ಈಗ ಸಿಲಿಕಾನ್ ಸಿಟಿ ಜನರಿಗೆ ಎದುರಾಗಿದೆ. ಬೆಸ್ಕಾಂ ಈಗ ವಿದ್ಯುತ್ ದರ ಏರಿಕೆ ಮಾಡಲು ಮುಂದಾಗಿದೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಹೀಗಾಗಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(KERC)ಕ್ಕೆ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ.
ಎಲ್ಲಾ ಮಾದರಿಯ ವಿದ್ಯುತ್ ಬಳಕೆದಾರರಿಗೂ ಬೆಸ್ಕಾಂ ಶಾಕ್ ನೀಡಲು ಮುಂದಾಗಿದೆ. ಮುಂದಿನ 3 ವರ್ಷಗಳಿಗೆ ಅನ್ವಯ ಆಗುವಂತೆ ಬೆಲೆ ಏರಿಕೆಗೆ ಬೆಸ್ಕಾಂ ಮುಂದಾಗಿದೆ. ಹೀಗಾಗಿ ಬೆಲೆ ಏರಿಸಲು ಅನುಮತಿ ನೀಡುವಂತೆ KERC ಗೆ ಬೆಸ್ಕಾಂ ಮನವಿ ಮಾಡಿದೆ.
ದರ ಪರಿಷ್ಕರಣೆ ವಿಷಯಕ್ಕೆ ಸಂಬಂಧಿಸಿದಂತೆ ಫೆ. 17ರಂದು ಸಾರ್ವಜನಿಕರ ಆಕ್ಷೇಪಣೆ ಸ್ವೀಕಾರ ಮಾಡಲು ಮುಂದಾಗಿದೆ. ಈಗ ಬೆಸ್ಕಾಂ ಪ್ರಸ್ತಾವನೆಗೆ ಕೈಗಾರಿಕೋದ್ಯಮಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ವಾಣಿಜ್ಯ ಬಳಕೆದಾರರು ಕೂಡ ಬೆಸ್ಕಾಂ ನಡೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಸ್ಕಾಂ KERC ಗೆ ಸಲ್ಲಿಸಿರುವ ಪ್ರಸ್ತಾವನೆ ಏನು?
2025-26 ನೇ ಹಣಕಾಸು ವರ್ಷಕ್ಕೆ ₹67 ಪೈಸೆ/ಯೂನಿಟ್
2026-27 ನೇ ಹಣಕಾಸು ವರ್ಷಕ್ಕೆ ₹75 ಪೈಸೆ/ಯೂನಿಟ್
2027-28 ನೇ ಹಣಕಾಸು ವರ್ಷಕ್ಕೆ ₹91 ಪೈಸೆ/ಯೂನಿಟ್